Saturday, August 17, 2013

A Page from a Journal!!!



16.8.2013, 11.30 PM

Never have I mentioned the time while writing my journal, have I? Then why did I do it today? Maybe to convince myself that nobody else is awake while I am writing this. My roommate is asleep. My friends have also gone to bed after a tiring day. My hands are trembling as I write this down, but I have no option left. I have to put it out of my system somehow. I just don't want them to know that I am feeling as I am feeling now - it's difficult to express THAT feeling in words!
Let me get to the point - I TASTED NON-VEG TODAY. For the first time in my life - ever! That is why my hands are trembling as I mention it. I don't know why - from the moment I tasted, I have been feeling guilty. My friends tell me "Arre! It's O.K dost. Most of us here eat non-veg. So, all we say is 'Welcome to the league'. You'll enjoy it. Veg khana doesn't have that "dum-n-khadar", you see. You get used to eating this and you will never want to eat 'boring' vegetarian stuff again." What they don't seem to understand is that my upbringing, tradition and values don't allow me to eat non-veg. Personally, I have never wanted to eat non-veg. But then, the vegetarian food here doesn't taste good. During lunch or dinner, whenever I see my friends relishing either chicken or fish, I felt that I was missing out on something.
 And today, something within me - an inner voice! - told me "Go and taste it, my friend. Family is 2K kms away. You can eat non-veg, flush it down the drain tomorrow and pretend as if nothing happened. Nobody will ever get to know - except your friends around. Moreover, they shall support you - your friends." With that green signal, in that moment of "weakness" and "temptation", I ordered a chilly chicken! Even as I took the chicken piece towards the mouth, my hands were trembling. My friends around - all non-vegetarians - were laughing at me. "What kind of a man are you? Scared to taste non-veg...Come on buddy! We are with you" they said. The laughter continued. It grew so loud that almost the entire canteen turned towards our table. The spotlight was on me. The news that I was tasting non-veg for the first time spread throughout the canteen. People joined in the laughter. 
My face turned red with humiliation - I could feel it! My ears became hot. I thought 'I need to put an end to this. I need to show them that I am not weak - by tasting non-veg! This is my chance to show them what I am made up of.' With that, my right hand - with the piece of chicken - reached my mouth.
What a feeling it was! It was soft. It was hot. It was spicy. For the first time since my arrival here, I tasted something that was so spicy! My tongue relished it! I enjoyed the initial feeling. I didn't even drink much water - just to let the taste stay! However, guilt took over soon. 
I was and still am worried about what the reaction back home would be - from my parents and all the other relatives & friends - when they learn that I tasted non-veg? Thoughts of me being disowned by the family crossed my mind more than once. How will I be treated back home? Will I just be teased and taunted? Or, will I have to face something harsh? Will my orthodox family understand my plight here - the condition of the canteen facilities here? Or, will they restrict themselves to their narrow field of view and abuse me verbally with the choicest of terms(which, sometimes, I feel I deserve for this act)? Will they understand that survival is important? Or, will they say that how we survive is important?
I might have digested the chicken I ate during lunch some 10 hours back. However, I am yet to digest the fact that I - being from the kind of family I am from - tasted non-veg! How am I supposed to break the news to them? I fear the prospect of telling this to them. Should I tell them at all? Maybe I shouldn't. But then, that guilt will prick me throughout my life. I will lose my self-respect and self-esteem due to that guilt.
I didn't tell my parents when they called tonight. I shall have to decide whether or not to tell them & if yes, how to tell them. All that I can say now is that I am in for a rough night and tonight is surely not going to be a good night! 
Feeling tense...worried...guilty...scared...


Friday, August 9, 2013

ಹೀಗೊಂದು ಶೌಚಪುರಾಣ....



ಒಂದು ಮಾಮೂಲಿ ಬೆಳಗ್ಗೆ... 
"ಗುರು, ಒಂದು ಕಿಂಗ್ ಕೊಡಮ್ಮ" ಎಂದು ಅವನು ಹಾಲಿನಂಗಡಿ ಮಂಜನನ್ನು ಕೇಳಿದ. 
 ಮಂಜ ತನ್ನ ಬೆಳಗಿನ ಗಿರಾಕಿಗಳಿಗೆ ಹಾಲು ನೀಡುತ್ತಾ ಹಣ ವಸೂಲಿ ಮಾಡುವುದರಲ್ಲಿ ಮಗ್ನನಾಗಿದ್ದ. "ಒಂದು ನಿಮಿಷ  ಇರಿ ಸ್ವಾಮೀ! ಮೊದಲು ಹಾಲು ತೊಗೊಳ್ಳೋರು ತೊಗೊಳ್ಳಿ. ನಿಮ್ಮ ಕಿಂಗು ಎಲ್ಲ ಆಮೇಲೆ. ಸ್ವಲ್ಪ ತಡೀರಿ!" ಎಂದು ಮಂಜ ತನ್ನ ಕೆಲಸದ ನಡುವೆ ಉತ್ತರ ನೀಡಿದ. 
" ನೀನು ಹೇಳಿದ್ದು ನನಗೆ  ತಿಳಿಯತ್ತೆ. ನನ್ನ ಹೊಟ್ಟೆ ಕೇಳಬೇಕಲ್ಲ?! ನನ್ನ ಕಷ್ಟ ನಂಗೆ... ಬೇಗ ಕೊಡಯ್ಯ!  ಸಲೀಸಾಗತ್ತೆ!" ಎನ್ನುತ್ತಾ ಅವನು ಮಂಜನ ಮುಖದೆಡೆಗೆ ದುಡ್ಡು ತಿವಿದ. 
"ಬೆಳಗ್ಗೆ ಬೆಳಗ್ಗೆ ಎಂಥ ಹೊಲಸು ಕೆಲಸಕ್ಕೆ ಬರ್ತೀರಯ್ಯ! ತೊಗೊಂಡು  ಹೋಗು ಮೊದ್ಲು" ಎಂದು ಮಂಜ ಮುಖ ಸಿಂಡರಿಸಿಕೊಂಡು ಅವನಿಗೆ ಒಂದು ಕಿಂಗ್ ಕೊಟ್ಟು ಸಾಗಿಹಾಕಿದ. ಅವನು  ಖುಷಿಯಿಂದ ಅಲ್ಲಿಯೇ ಇದ್ದ ಪಬ್ಲಿಕ್ ಶೌಚಾಲಯಕ್ಕೆ ಓಡಿಹೋದ. ಹಾಲಿನಂಗಡಿಯ ಬಳಿಯಿದ್ದ ಜನರೆಲ್ಲಾ  ಅವನನ್ನು ನೋಡಿ ನಗುತ್ತಾ ಹೋದರು. 

ಅವನು ಅಲ್ಲಿದ್ದ ಒಂದು ಶೌಚದೊಳಗೆ ಹೋದ. "ಥೂ! ಅದ್ಯಾವೋನು ಬಂದಿದ್ನೋ ಮುಂಚೆ! ಹೊಟ್ಟೆಗೆ ಏನಾದ್ರೂ ತಿನ್ಲಿ! ಹೋದಮೇಲೆ, ನೆಟ್ಗೆ ನೀರು ಹಾಕೋ ಬುದ್ಧಿ ಬೇಡ?! ಅವ್ನ ಮನೆ ಹಾಳಾಗ!...ನಾನೋ! ಸಿಗರೇಟು ತಂದೆ. ಬೆಂಕಿ  ತರೋದು ಮರೆತೆ! ನನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ!" ಎಂದು ಸ್ವನಿಂದನೆಗೆ ಅವನು ಮೊದಲುಮಾಡಿದ. 
"ಓಹೋ! ನಮಸ್ಕಾರ ಸಾರ್! ಬೆಂಕಿಪೊಟ್ಟಣ ಬೇಕ?" ಎಂದು ಪಕ್ಕದ ಶೌಚದಿಂದ ಇವನು ಕೇಳಿದ. 
"ಹೌದು! ಕೊಡ್ತೀರಾ? ತೀರ ಅರ್ಜೆಂಟು!" ಎಂದು ಅವನು ದೈನ್ಯದಿಂದ ಕೇಳಿದ. ಬೆಂಕಿಪೊಟ್ಟಣ ಗೋಡೆ ಹಾರಿ ಬಂತು. ಅವನಿಗೆ ಹೋದ ಜೀವ ಮರಳಿ ಬಂದಂತೆ ಅಯ್ತು. 
"ಆಹಾ! ಇದು ನೋಡಿ ಸುಖ ಅಂದ್ರೆ! ತುಂಬಾ ಥ್ಯಾಂಕ್ಸ್!" ಎನ್ನುತ್ತಾ ಅವನು ಸೇದಲು ಶುರು  ಮಾಡಿದ. 
"ನೀವು ಎಲ್ಲಿ ಅವ್ರು ಸಾರ್? ಏನು ನಿಮ್ಮ ಕಥೆ?" ಎನ್ನುತ್ತಾ ಇವನು ಮಾತು ಶುರು ಮಾಡಿದ. 
ಅವನು ತನ್ನ  ಕಥೆಯನ್ನು ಶುರು ಮಾಡಿದ. "ನಂದು ಇಲ್ಲೇ ಕನಕಪುರದ ಹತ್ರ ಹೊಸಹಳ್ಳಿ. ಬೇಸಾಯದ ಕುಟುಂಬ. ಅದ್ಯಾಕೋ ಗೊತ್ತಿಲ್ಲ -  ಕಳೆದ ಎರಡು  ವರ್ಷಗಳಿಂದ ನನ್ನ ಭೂಮೀಲಿ ಸರೀಗೆ  ಬೆಳೆ ಬರ್ತಾ ಇಲ್ಲ.  ಏನೇನೋ ಮಾಡಿದ್ದಾಯ್ತು. ಮಂತ್ರ ತಂತ್ರ ಹೋಮ ಪೂಜೆ - ಎಲ್ಲವೂ. ಏನೂ ಪ್ರಯೋಜನ  ಅಗ್ಲಿಲ್ಲ. ಪೂಜೆ ಮಂತ್ರದ ಹೆಸರಲ್ಲಿ  ಪೂಜಾರಿ ಜೋಯ್ಸಾ - ಇವರುಗಳು ನನ್ನ ಸುಲಿಗೆ ಮಾಡಿ ದುಡ್ಡು ಮಾಡ್ಕೊಂಡ್ರು. ನನ್ನ ತಂದೆ ತಾಯಿ ಹೆಂಡತಿಗೆ  ಇದರಲ್ಲಿ  ನಂಬಿಕೆ ಜಾಸ್ತಿ. 'ಬೆಂಗಳೂರಿಗೆ ಹೋಗಿ  ಬೇಸಾಯದ ಬಗ್ಗೆ ತಿಳ್ಕೊಂಡಿರೋರನ್ನ ಕೇಳಿ ಕೆಲಸ ಮಾಡೋಣ' ಅಂದ್ರೆ ದುಡ್ಡು ದಂಡ ಅಂತ ನನ್ನ ಮನೆ ಇಂದ  ಹೊರಕ್ಕೆ ಬಿಡ್ತಾ ಇರ್ಲ್ಲಿಲ್ಲ. ನನಗೂ ರೋಸಿ ಹೋಯ್ತು. ಇವತ್ತು ಬೆಳಗ್ಗೆ ಅವರುಗಳು  ಏಳೋ ಮುಂಚೇನೇ ಎದ್ದು ಮನೆಯಿಂದ ಹೊರಟೆ.  ಇಲ್ಲಿಗೆ  ಬಂದು ನಿಮ್ಮ ಪರಿಚಯ ಅಯ್ತು. ಇದೇ ನನ್ನ ಕಥೆ. ನಿಮ್ದೇನು ಕಥೆ?" ಎಂದು ಅವನು ತನ್ನ ಕಥೆ ಮುಗಿಸಿದ. 
"ನಂದೇನು ಹೆಚ್ಚಿಲ್ಲ ಸ್ವಾಮಿ! ಇಲ್ಲೇ ಎದರುಗಡೆ ಬ್ಯಾಗ್ ಪರ್ಸು ಹೊಲಿಯೋದೆ ನನ್ನ ಕೆಲಸ. ಸುಮಾರು ಇಪ್ಪತ್ತು ವರ್ಷದ ಮುಂಚೆ ನನ್ನ ಊರಾದ ಮದುರೆ ಇಂದ ಓಡಿ ಬಂದೆ - ಅಪ್ಪನ ಜೊತೆ ಜಗಳ ಆಡಿ. ಇಲ್ಲಿಗೆ ಬಂದು ಬ್ಯಾಗ್ ಹೊಲ್ಯೋದನ್ನ ಕಲ್ತೆ.  ನನ್ನ ಹೊಟ್ಟೆ ತುಂಬ್ಸೋ ಖುದಾ ಅದು.  ಹೆಂಡ್ರು ಮಕ್ಳು ಇಲ್ಲ.   ಬಂದಿದ್ದು ತೊಗೊಂಡು 'ಅಲ್ಲಾ ಕೊಟ್ಟಿದ್ದು' ಅಂತ ಆರಾಮಾಗಿ ಇದ್ದೀನಿ" - ಇವನು ತನ್ನ ಕಥೆ ಮುಗಿಸೋ  ವೇಳೆಗೆ ಹೊರಗೆ ರೇಡಿಯೋದಲ್ಲಿ ಹಾಡು ಆರಂಭವಾಯ್ತು - "ಬದ್ತಮೀಸ್ ದಿಲ್..." ಎಂದು. 
"ಲೇ! ಯಾರೋ ಅದು! ಕನ್ನಡ ಹಾಡು ಹಾಕ್ರೋ !" ಎಂದು ಅವನು ಅರಚಿದ. ಕೂಡಲೇ "ವೆಂಕಟೇಸ..."ಎಂದು ಹಾಡು ಬದಲಾಯಿತು. 
"ಹೌದು .. ನಾವು ಯಾಕೆ ಹೀಗೆ ಜನ್ಮ ಜಾತಕ ಹೇಳ್ಕೊಂಡ್ವಿ? ನಂಗೂ ನಿಮಗೂ ಏನು ಸಂಬಂಧ?" - ಏನು ತೋಚದೆ ಅವನು ಕೇಳಿದ. 
"ಅದೇ ಸ್ವಾಮಿ ಜೀವನ. ಯಾರಿಗೆ ಯಾವಾಗ ಯಾರು ಎಲ್ಲಿ ಯಾಕೆ ಹೇಗೆ ಸಿಗ್ತಾರೆ ಅಂತ ಗೊತ್ತಿಲ್ಲ. ಗೊತ್ತಿದ್ರೆ,  ಖುದ ಅಗ್ತಿದ್ವಿ. ನಾನು ಹೇಳೋದು ಸರಿ ತಾನೇ?" - ಇವನು ತನ್ನ ಫಿಲಾಸಫಿ ಹೇಳಿದ. 
"ಪರವಾಗಿಲ್ಲಯ್ಯ - ಬ್ಯಾಗ್ ಹೊಲ್ಯೋನೆ ಆದರು, ಚೆನ್ನಾಗಿ ಮಾತಾಡ್ತೀಯ" - ಅವನು ತನ್ನ ಮೆಚ್ಚುಗೆ ಸೂಚಿಸಿದ. 
"ಏನೋ! ನಿಮ್ಮಂಥ ಜನ ಮಾತಾಡೋದನ್ನ ಕೇಳಿ ಕಲ್ತಿರೋದು. ಸರಿ ಸ್ವಾಮಿ! ನನ್ನ ಕೆಲಸ ಅಯ್ತು. ನಾನು ಬರ್ತೇನೆ. ಅಲ್ಲಾ ಒಳ್ಳೇದು ಮಾಡ್ಲಿ ನಿಮ್ಗೆ. ಮುಂದಿನಸಲ ಮುಖಾಮುಖಿ ಭೇಟಿ ಮಾಡೋಣ. ಸಧ್ಯಕ್ಕೆ ನಂಗೂ ಹೊಲ್ಯೋ ಕೆಲಸ ಇದೆ. ಶುಕ್ರಿಯ!" ಎನ್ನುತ್ತಾ ಇವನು ಹೊರಟು ಹೋದ. 
ಅವನು ಯೋಚಿಸುತ್ತಾ  ಕುಳಿತ - ತನ್ನ ಜೀವನದ ಕಥೆ ಎಲ್ಲವನ್ನು ಮುಖವೂ ನೋಡದೆ ಯಾರೋ ಒಬ್ಬನಿಗೆ ಹೇಳಿದ್ದು ಯಾಕೆ? ಆ ಇನ್ನೊಬ್ಬನೂ ಕೂಡ ಎಲ್ಲವನ್ನೂ ಹೇಳಿದ್ದು ಯಾಕೆ? ಹೆಸರನ್ನೂ ಕೇಳಲಿಲ್ಲ... 
"ಸೂಪರ್ ವೆಂಕಟೇಸ...." ಹಾಡು ಕೇಳುತ್ತಲೇ ಇತ್ತು. 
 ನಿಜ - ಜೀವನದ ಎಲ್ಲ  ಆಗು-ಹೋಗುಗಳ ಅರ್ಥ ತಿಳಿದರೆ, ಅಂದೇ ಆ  ಮನುಷ್ಯ ಭಗವಂತನಾಗುತ್ತಾನೆ.  ಆದರೆ, ಜೀವನದ ಸಾರವನ್ನೇ ಅದು ಕಳೆಯುತ್ತದೆ ತಾನೇ? ಯೋಚಿಸಬೇಕು...