Wednesday, December 4, 2019

ಕೌದಿ

ಊರ ಜಾತ್ರೆಗೆಂದು ರಜದ ಮೇಲೆ ಬಂದಿದ್ದ ಅವಳ ಗಂಡ, ಮಗುವಿನೊಂದಿಗೆ ಕೌದಿಯ ಮೇಲೆ - ಅವಳು ಹೊಲಿದಿದ್ದ ಕೌದಿಯ ಮೇಲೆ -  ಆಡುತ್ತಿದ್ದ. ತನ್ನ ಪುಟ್ಟ ಗೂಡು, ಪುಟ್ಟ ಸಂಸಾರವನ್ನು ಕಂಡು ಅವಳ ಮುಖದ ಮೇಲೆ ನೆಮ್ಮದಿಯ, ಅಭಿಮಾನದ ಕಿರುನಗೆ ಮೂಡಿತು. ಊರಿನಿಂದ ಬರುವಾಗ ಅವನು ತಂದಿದ್ದ ಬಟ್ಟೆಗಳನ್ನು ಸರಿಮಾಡುತ್ತಾ ಅವಳು ಕುಳಿತಿದ್ದಳು. ಈ ಬಾರಿ ಕೌದಿಗೆಂದು ಅವನು ನೀಡಿದ್ದ ಅಂಗಿಯನ್ನು ತನ್ನೆದೆಗೆ ಅವುಚಿಕೊಂಡಳು. ಆಶ್ಚರ್ಯವೆಂಬಂತೆ, ಅವಳಿಗೆ ಆ ಅಂಗಿಯಿಂದ ಇನ್ಯಾರೋ ಮುಡಿದ ಮಲ್ಲಿಗೆಯ ವಾಸನೆ ಬಡಿಯಿತು.

ಏನೂ ತೋಚದವಳಾಗಿ ಅವಳು ಅಲ್ಲೇ ಕುಳಿತಳು.....

********************

ಊರ ಜಾತ್ರೆಯ ಸಂದರ್ಭದಲ್ಲೇ, ನಾಲ್ಕು ವರ್ಷಗಳ ಹಿಂದೆ ಅವನಿಗೂ ಅವಳಿಗೂ ಪರಿಚಯವಾಗಿದ್ದು. ಅದುವರೆಗೂ ಅವರಿಗೆ ಆ ಊರಿನಲ್ಲಿ ತಮ್ಮವರು ಎಂದು ಯಾರೂ ಇರಲಿಲ್ಲ. ಇಬ್ಬರೂ ಅನಾಥರೇ. ಊರಿನ ಜನರ ನಡುವೆ ಬದುಕುತ್ತಲೇ, ಅವರು ಜೀವನವನ್ನು ಕಲಿತಿದ್ದರು. ಹಾಗೆ ಮಾಡದೆ ಬೇರೆ ಆಯ್ಕೆಯೂ ಇರಲಿಲ್ಲ. 'ಕಲಿತಿದ್ದರು' ಎನ್ನುವುದಕ್ಕಿಂತ ಬದುಕೇ ಕಲಿಸಿತ್ತು ಅಂದರೆ ಹೆಚ್ಚು ಸೂಕ್ತ. ಜಾತ್ರೆಯ ನಂತರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮದುವೆಗಳಲ್ಲಿ ಅವರದ್ದೂ ಒಂದಾಗಿತ್ತು, ಆ ವರ್ಷ. ಅಂತೂ, ಒಂಟಿಯಾಗಿದ್ದವರು ಜಂಟಿಯಾಗಿ ತಮ್ಮ ಪುಟ್ಟ ಗೂಡನ್ನು ಪ್ರವೇಶಿಸಿದ್ದರು. 

ಇಷ್ಟು ವರ್ಷ ಒಬ್ಬಂಟಿಗಳಾಗಿ ಹೇಗೋ ಬದುಕು ಸಾಗಿತ್ತು. ಆದರೆ, ಈಗ, ಅವನಿಗೂ ಹೆಂಡತಿಯಿದ್ದಳು. ತಮ್ಮದೇ ಆದ ಮನೆಯಿತ್ತು. ಜವಾಬುದಾರಿಗಳಿದ್ದವು. ಊರಲ್ಲಿ ದೊರೆಯುತ್ತಿದ್ದ ಸಂಬಳ ಅವರ ಇಂದಿಗೆ ಆಗುತ್ತಿತ್ತೇ ಹೊರತು ನಾಳಿನ ಕನಸುಗಳಿಗಲ್ಲ. ಹಾಗೆಂದು, ಕನಸು ಕಾಣುವುದನ್ನು ನಿಲ್ಲಿಸಲಾದೀತೇ? ಹುಟ್ಟಂದಿನಿಂದ ಅವರಿಬ್ಬರಿಗೆ ತಿಳಿದಿದ್ದಾದರೂ ಅದೊಂದೇ ಅಲ್ಲವೇ - ಕನಸು ಹೆಣೆಯುವುದು? ಕೆಲವು ತಿಂಗಳುಗಳ ಕಾಲ ಹೊಸ ಸಂಸಾರದಲ್ಲಿ ಖುಷಿಪಟ್ಟು ಅವನು ಪಟ್ಟಣಕ್ಕೆ  ಕೆಲಸಕ್ಕಾಗಿ ಹೊರಟ. ಎರಡು ಮೂರು ವಾರಗಳಿಗೊಮ್ಮೆ ಬಂದು, ಇದ್ದು, ಹೋಗುತ್ತಿದ್ದ. 

ಆವಳಾದರೂ ಊರಿನಲ್ಲಿ ಒಬ್ಬಳೇ ಏನು ಮಾಡಬೇಕು? ಮೂರು-ನಾಲ್ಕು ದಿನಗಳಿಗೊಮ್ಮೆ ಅವನಿಗೆ ಪತ್ರ ಬರೆಯುತ್ತಿದ್ದಳು. ಅವನೂ ಉತ್ತರಿಸುತ್ತಿದ್ದ. ಅವರ ಪತ್ರಗಳು ವ್ಯಾಕರಣಬದ್ಧವಾಗಿದ್ದವೋ ಇಲ್ಲವೋ ಗೊತ್ತಿಲ್ಲ. ಪರಿಶುದ್ಧವಾಗಿದ್ದವು. ಪದಗಳಲ್ಲೇ ಪರಸ್ಪರರನ್ನು ಮುದ್ದಿಸುತ್ತಿದ್ದರು. ಆದರೂ, ಪತ್ರ ಬರೆಯುವುದರಲ್ಲೇ ದಿನಗಳನ್ನು ತಳ್ಳಲಾದೀತೇ? ಆಗ ಅವಳು ಅವರಿಬ್ಬರಿಗಾಗಿ ಕೌದಿಯೊಂದನ್ನು ತಯಾರಿಸುವ ನಿರ್ಧಾರಕ್ಕೆ ಬಂದದ್ದು. 

ಕೌದಿ ಹೊಲಿಯುವುದು ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಅವಳಿಗೆ ಎಲ್ಲಿಂದಲೋ ತಂದ ಚಿಂದಿ ಬಟ್ಟೆಗಳನ್ನು ಸೇರಿಸಿ ಮಾಡುವ ಕೌದಿ ಬೇಕಿರಲಿಲ್ಲ. ಅವಳ, ಅವನ ಬಟ್ಟೆಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಕೌದಿಯೇ ಆಗಬೇಕಿತ್ತು. ಅದು ಅವಳಿಗೆ ಕೇವಲ ಬಟ್ಟೆಯ ತುಂಡುಗಳಾಗಿರಲಿಲ್ಲ. ಅವರ ಸಂತೋಷ, ಸಿಡುಕು, ನೆನಪು, ಕನಸುಗಳೆಲ್ಲವನ್ನು ಹೊತ್ತ ಬೆಚ್ಚನೆಯ ಹೊದಿಕೆಯಾಗಿತ್ತು. ಜೀವನದಲ್ಲಿ ಅದುವರೆಗೂ 'ನಮ್ಮದು' ಎಂದು ಹೇಳಿಕೊಳ್ಳುವಂತಹ ಯಾವುದೇ ವಸ್ತು ಅವರಲ್ಲಿರಲಿಲ್ಲ. ಈ ಕೌದಿ ಆ ಕೊರತೆಯನ್ನು ನೀಗಿಸುವದಕ್ಕಾಗಿ ಎಂದು ಅವಳು ನಿಶ್ಚಯಿಸಿದ್ದಳು. 

ಅವರ ಹೊಸಸಂಸಾರದ ಹೊಸ ಕೌದಿಗೆ ಅವಳು ಅವರಿಬ್ಬರೂ ತಮ್ಮ ಮೊದಲ ಭೇಟಿಯ ದಿನದಂದು ಧರಿಸಿದ್ದ ಸೀರೆ, ಪಂಚೆಗಳನ್ನು ಹೊರತೆಗೆದಳು. ಅವುಗಳ ಸ್ಪರ್ಶದಲ್ಲಿ, ವಾಸನೆಯಲ್ಲಿ ಆ ದಿನದ ನೆನಪುಗಳು ಇನ್ನೂ ಹಸಿಹಸಿಯಾಗಿದ್ದದ್ದು ಅವಳಿಗೆ ಅರಿವಾಗಿತ್ತು.... 

ಹಾಗೆ ನೋಡಿದರೆ, ಅಂದು ಅವರಿಬ್ಬರು ಭೇಟಿಯಾಗಲೇ ಬೇಕಾಗುವಂತಹ ಸಂದರ್ಭವೇನು ಇರಲಿಲ್ಲ. ಊರ ಜಾತ್ರೆಯಲ್ಲಿ ಕೆಲಸ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಇವರೂ ಅದರಂತೆ ತಮ್ಮ ಕೈಲಾದ ಸೇವೆ ಮಾಡಲು ಬಂದಿದ್ದರು. ಅವನು ಪೂಜೆಯ ಸಾಮಾನುಗಳು, ಸಂತರ್ಪಣೆಯ ದಿನಸಿಗಳಿರುವ ಮೂಟೆಗಳನ್ನು ಹೊತ್ತು ಸಾಗಿಸುತ್ತಿದ್ದರೆ, ಅವಳು ಹೋಗಿ ಬರುವ ಭಕ್ತರಿಗೆ ಪ್ರಸಾದ, ಪಾನಕ ಹಂಚುವ ಕೆಲಸದಲ್ಲಿದ್ದಳು. ಮೂಟೆಗಳನ್ನಿಳಿಸಿ ಪ್ರಸಾದಕ್ಕೆಂದು ಅವನು ಬಂದಾಗ, ಅವರಿಬ್ಬರು ಒಬ್ಬರನ್ನೊಬ್ಬರು ಕಂಡಿದ್ದರು. ಅಷ್ಟು ವರ್ಷ ಅದೇ ಊರಲ್ಲಿದ್ದು ಅದು ಹೇಗೆ ನೋಡಿರಲಿಲ್ಲವೋ ಯಾರಿಗೂ ಗೊತ್ತಿಲ್ಲ. ಅಥವಾ ನೋಡಿದ್ದರೂ, ಅಷ್ಟು ಗಮನ ನೀಡದೇ ಇದ್ದಿರಬಹುದು - ಅವಳೇನೂ ಹೇಳಿಕೊಳ್ಳುವಂಥ ಸುಂದರಿಯಲ್ಲ. ಅವನೂ ಅಷ್ಟೇ. ಅಂದಿನ ಬಟ್ಟೆಯಲ್ಲೇ ಏನಾದರೂ ವಿಶೇಷವಿದ್ದಿರಬಹುದು ಎನ್ನಲು, ಅವರು ತೊಟ್ಟಿದ್ದ ಬಟ್ಟೆ ಸಹ ಅವರಾಗಿ ಕೊಂಡದಲ್ಲ, ತಮ್ಮವರು ಕೊಡಿಸಿದ್ದಲ್ಲ. ದಾನವಾಗಿ ಬಂದದ್ದು - ಅವರ ಹೆಸರುಗಳಂತೆ. ಅವನಿಗೆ ಅವಳು ಯಾವ ಕಾರಣಕ್ಕೋ ಹಿಡಿಸಿದ್ದಳು. ಅವಳಿಗೂ ಅಷ್ಟೇ. ಹೇಳಲು ಕೇಳಲು ಹಿರಿಯರು ಎಂದು ಯಾರೂ ಇರಲಿಲ್ಲ. ಕಣ್ಣು ಮುಚ್ಚಿ ತೆರೆಯುವುದರಲ್ಲಿ, ಸರಳವಾಗಿ ಅವರ ಮದುವೆಯೇ ನಡೆದುಹೋಗಿತ್ತು. ಪುಣ್ಯ ಲಭಿಸಿತ್ತೋ ಇಲ್ಲವೋ. ಒಬ್ಬರಿಗೊಬ್ಬರು ದಕ್ಕಿದ್ದರು....

'ಮುಂದೆ ಹುಟ್ಟುವ ನಮ್ಮ ಮಕ್ಕಳಿಗೆ ಈ ಕಥೆಯನ್ನು ಹೇಳಿದರೆ, ಅವರಾದರೂ ನಂಬುತ್ತಾರೆಯೇ?' ಎಂದು ನೆನೆಯುತ್ತಾ ಅವಳು ನಕ್ಕಿದ್ದಳು. ಅವರಿಬ್ಬರಿಗೇ ನಂಬಲು ಸಾಧ್ಯವಾಗಿರಲಿಲ್ಲ ಎಷ್ಟೋ ದಿನ! ಹಸಿರು ಬಣ್ಣದ ಮೇಲೆ ಬಿಳಿಯ ಹೂವುಗಳ ಚಿತ್ರವಿದ್ದ ಅವಳ ಸೀರೆಗೆ, ಅವನ ಬಿಳಿಯ ಪಂಚೆಯ ತುಂಡನ್ನು ಸೇರಿಸಿ ಹೊಲೆಯಲಾರಂಭಿಸಿದ್ದಳು. ಅವನಿಗೆ ಬರೆದ ಮುಂದಿನ ಪತ್ರದಲ್ಲಿ, ಅವರ ಈ ಕೌದಿಯ ವಿಚಾರವನ್ನು ತಿಳಿಸಿದ್ದಳು. 

ಮುಂದಿನ ಬಾರಿ ಅವನು ಊರಿಗೆ ಬರುವ ವೇಳೆಗೆ, ಕೌದಿ ತಕ್ಕಷ್ಟು ದೊಡ್ಡದಾಗಿತ್ತು. ಅವನು ಬರಲೆಂದೇ ಅವಳು ಆ ಕೌದಿಯನ್ನು ಒಮ್ಮೆಯೂ ಬಳಸದೆ ಕಾಯುತ್ತಿದ್ದಳು. ಸ್ವಲ್ಪ ಇಕ್ಕಟ್ಟಾದರೂ, ಅವರಿಬ್ಬರೂ ಮಲಗುವಷ್ಟು ಜಾಗವಿತ್ತು ಅದರಲ್ಲಿ. ಆ ರಾತ್ರಿ, ಅವರು ಊರಿನ ಗದ್ದೆಯೊಂದರಲ್ಲಿ ಬೆಳದಿಂಗಳ ಊಟಕ್ಕಾಗಿ ಹೋದರು. ಕೌದಿಯ ಮೇಲೆಯೇ ಅವರ ಊಟ. ಬೆಳದಿಂಗಳನ್ನು ಸವಿಯುತ್ತಾ ಅಲ್ಲಿಯೇ ರಾತ್ರಿಯನ್ನು ಕಳೆದರು. ಆ ರಾತ್ರಿ, ಅವರ ಪಿಸುಮಾತುಗಳಿಗೆ, ಹೆಣೆದ ಕನಸುಗಳಿಗೆ ಸಾಕ್ಷಿಯಾಗಿದ್ದು ಆ ಕೌದಿ ಹಾಗು ಮೇಲಿದ್ದ ಹುಣ್ಣಿಮೆ ಚಂದ್ರ ಮಾತ್ರ. ಅವರ ಮೈಯ ವಾಸನೆ, ಬೆವರ ಹನಿಗಳೊಂದಿಗೆ ಅವೆಲ್ಲವೂ ಬೆರೆತು ಕೌದಿಯನ್ನು ಸೇರಿತ್ತು. ಕೌದಿಯ ಸ್ಪರ್ಶವಾದಾಗಲೆಲ್ಲ ಅವಳು ಆ ರಾತ್ರಿಯನ್ನು ನೆನೆದು ಪುಳಕಗೊಳ್ಳುತ್ತಿದ್ದಳು. 

ಮಾರನೆಯ ದಿನ, ಕೌದಿಯನ್ನು ಮೊದಲ ಬಾರಿ ಒಗೆದು, ಅವರ ಮನೆಯ ಮುಂದೆ ಒಣಗಲು ಹರವಿದ್ದಳು. ಊರಿನ ಜನರೆಲ್ಲಾ ಅದನ್ನು ಕಂಡು ಅವಳನ್ನು ಹೊಗಳುವವರೇ. ಅವಳ ಬಟ್ಟೆಯ ತುಂಡುಗಳಿಗೂ ಅವನ ಬಟ್ಟೆಯ ತುಂಡುಗಳಿಗೂ ಅಂತರ ಗೊತ್ತಾಗದ ರೀತಿಯಲ್ಲಿ, ಹೊರಗೆ ಕಾಣದ ರೀತಿಯಲ್ಲಿ ಅದೆಷ್ಟು ಚೆನ್ನಾಗಿ ಹೊಲಿಗೆ ಹಾಕಿದ್ದಳು! ಚಿಂದಿ ಬಟ್ಟೆಗಳಾದರೂ, ಬಣ್ಣಗಳು ಅದೆಷ್ಟು ಚೆನ್ನಾಗಿ ಹೊಂದುತ್ತಿದ್ದವು! ತಂದೆ-ತಾಯಿಯಿಲ್ಲದ ಅವಳಿಗೆ ಇಷ್ಟು ನಯನಾಜೂಕುಗಳನ್ನು ಯಾರು ಕಲಿಸಿದರೋ! ನೆರೆಹೊರೆಯವರ ಮಾತು ಕೇಳಿ ಅವನು ಉಬ್ಬಿಹೋದ. ಅವಳ ಬಗ್ಗೆ ಹೆಮ್ಮೆಯಿಂದ ಬೀಗಿದ್ದ. ಊರಿನವರ ಕಣ್ಣು ಬೀಳಬಾರದು ಎಂದು ಅವನೇ ಸ್ವತಃ ಅವಳಿಗೆ ದೃಷ್ಟಿ ನೀವಾಳಿಸಿದ್ದ. 

ಕೆಲವು ವಾರಗಳ ನಂತರ, ಅವನಿಗೆ ಬರೆದ ಪತ್ರದಲ್ಲಿ ಅವಳು ತಿಳಿಸಿದ್ದಳು - ಅವರ ಆ ಕೌದಿಯಲ್ಲಿ ಆಡಲು ಹೊಸಬನೊಬ್ಬ  ಕುಟುಂಬಕ್ಕೆ ಬರುತ್ತಾನೆಂದು. ಸುದ್ದಿ ತಿಳಿದ ಅವನು ಕೂಡಲೇ ಊರಿಗೆ ಬಂದು, ಇಬ್ಬರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿ ಬಂದಿದ್ದರು. ಅವರಿಬ್ಬರ ಸೀರೆ - ಅಂಗಿಗಳ ಜೊತೆಗೆ, ಇನ್ನು ಕೆಲವೇ ತಿಂಗಳುಗಳಲ್ಲಿ ಪುಟ್ಟ ಅಂಗಿಯೋ ಲಂಗವೋ ಆ ಕೌದಿಗೆ ಸೇರುತ್ತದಲ್ಲ! ಇನ್ನು ಮುಂದೆ, ಕೌದಿಯನ್ನು ಹಿರಿದಾಗಿಸುವ ಜೊತೆಗೆ, ಬೆಚ್ಚಗಾಗಿಸುವ ರೀತಿಯಲ್ಲಿ ಹೊಲೆಯಲು ಅವಳಿಗೆ ತಿಳಿಸಿದ್ದ. ಅವಳಾಗಲೇ ಕೌದಿಗೆ ತನ್ನ ಪ್ರೀತಿ, ಕನಸುಗಳ ಕಾವನ್ನು ಹೇಗೆ ಹೆಣೆಯಬೇಕು ಎಂಬ ಯೋಚನೆಯಲ್ಲಿದ್ದಳು. 

ಅವನು ಪಟ್ಟಣಕ್ಕೆ ಹೋದ ನಂತರ ಒಂದು ಮಧ್ಯಾಹ್ನ, ಹೊಲಿಗೆ ಹಾಕುವಾಗ ಅವಳೊಂದು ಕನಸು ಕಂಡಿದ್ದಳು....  
ಅವರ ಪುಟ್ಟ ಗೂಡು ಸ್ವಲ್ಪ ಹಿರಿದಾಗಿತ್ತು. ಈಗ ಅವರಿಗೆ ಹುಟ್ಟುವ ಮಗುವಿನ ಜೊತೆ ಇನ್ನೆರಡು ಮಕ್ಕಳು. ಅವರು ದೊಡ್ಡವರಾಗುವ ವೇಳೆಗೆ, ಅವಳು ಹೊಲೆಯುತ್ತಿದ್ದ ಕೌದಿಯೂ ಹಿರಿದಾಗಿತ್ತು. ಅವರ ಮದುವೆಯ ನಂತರ, ಆ ಕೌದಿಯನ್ನು ನಾಲ್ಕು ಭಾಗವಾಗಿ ಮಾಡಿ, ಮೂರನ್ನು ಮಕ್ಕಳಿಗೆ ನೀಡಿ, ಒಂದನ್ನು ಆವರಿಬ್ಬರು ಇಟ್ಟುಕೊಂಡಿದ್ದರು. ಅವರಿಬ್ಬರು ಇಟ್ಟುಕೊಂಡ ಭಾಗದಲ್ಲಿ ನೆನ್ನೆಯ ಸವಿಯಾದ ನೆನಪುಗಳ ಜೊತೆ,  ನಾಳೆಯ ನೆಮ್ಮದಿಯ ಕನಸುಗಳನ್ನು ಹೆಣೆದಿತ್ತು. 

ತಮಗೆ ನೀಡಿದ ಭಾಗಗಳಿಗೆ ಅವರ ಮಕ್ಕಳು, ಹೆಂಡತಿಯರು ತಮ್ಮ ಬಟ್ಟೆಗಳನ್ನು ಸೇರಿಸಿ ಆ ಕೌದಿಯನ್ನು ಮುಂದುವರೆಸಿದ್ದರು. ಆ ಹೊಸ ಕೌದಿಯಲ್ಲಿ ಮೊಮ್ಮಕ್ಕಳು ಆಡಿದಾಗ ಅವಳಿಗೆ ತನ್ನ ಮೈಮೇಲೆಯೇ ಅವುಗಳು ಆಡಿದಂತೆ ಭಾಸವಾಗುತ್ತಿತ್ತು. ಮೊಮ್ಮಕ್ಕಳಿಗೆ ಮದುವೆಯಾದಾಗ, ಅವುಗಳ ತಂದೆ ತಾಯಿಯರೂ ಕೌದಿಯನ್ನು ಭಾಗ ಮಾಡಿ ಹಂಚಿದ್ದರು. ಮತ್ತೆ ಕೌದಿ ಬೆಳೆದು, ಮರಿಮಕ್ಕಳು ಆಡಿದರು...ಮುಂದಿನ ಎಷ್ಟೋ ಪೀಳಿಗೆಗಳವರೆಗೂ, ಅವರಿಗೆ ಈ ಕೌದಿಯನ್ನು ಮೊದಲು ಮಾಡಿದವರು ಯಾರು ಎನ್ನುವ ನೆನಪಿರುತ್ತಿತ್ತು. ಇವರ ಅನುಭವದ, ಜೀವನದ ವಾಸನೆ, ಕಲಿತ ಪಾಠಗಳು, ಆಡಿದ ಜಗಳಗಳು, ನಕ್ಕ ನಗುಗಳು..... ಎಲ್ಲವೂ ಜೀವಂತವಾಗಿ, ಇನ್ನೂ ಹೊಸದಾಗಿ ಪ್ರವಹಿಸುತ್ತಲೇ ಇದ್ದವು.....ಹೊಟ್ಟೆಯಲ್ಲಿದ್ದ ಮಗು ಒದ್ದಂತಾಗಿ, ಅವಳು ಕನಸಿನಿಂದ ಎದ್ದಿದ್ದಳು. 

ಅಂತೂ, ಮಗು ಹುಟ್ಟಿತ್ತು. ಅವರಿಬ್ಬರಿಗೂ ಸಂಭ್ರಮವೋ ಸಂಭ್ರಮ - ತಮ್ಮದು ಎನ್ನುವ ಒಂದು ಜೀವವಿದೆಯಲ್ಲ ಎಂದು. ಅಷ್ಟು ದಿನ ಬರಿದಾಗಿದ್ದ ಅವರ ಮನೆ, ಅವರ ಕೌದಿ ಈಗ ಮಗುವಿನ ಆಟಿಕೆಗಳಿಂದ ತುಂಬಿತ್ತು. ಎರಡು ಮೂರು ವಾರಗಳಿಗೆ ಊರಿಗೆ ಬರುತ್ತಿದ್ದ ಅವನು, ಈಗ ಪ್ರತಿ ವಾರವೂ ಬರುತ್ತಿದ್ದ. ಪ್ರತಿ ಬಾರಿಯೂ ಹೊಸ ಬಟ್ಟೆಗಳು, ವಸ್ತುಗಳು. ಪ್ರತಿ ಬಾರಿಯೂ ಹೊಸತೆಂಬಂತೆ ಅವನ ಅವಳ ನಡುವಿನ ಹುಸಿಮುನಿಸು, ಜಗಳಗಳು: ಮಗು ನೋಡಲು ಅವನಂತೆಯೋ ಅವಳಂತೆಯೋ ಎಂದು. ಅವನಿಗೆ ಆತಂಕವಿತ್ತು: ಮಗು ಹುಟ್ಟಿದ ನಂತರ, ತನ್ನನ್ನು ಎಲ್ಲಿ ಅವಳು ಕಡೆಗಳಿಸುವಳೋ ಎಂದು. ಸಧ್ಯ, ಆ ರೀತಿ  ಏನೂ ಆಗಿರಲಿಲ್ಲ. 

ಮೊದಮೊದಲು ಅವಳ ಬಿಡುವಿನ ಸಮಯವೆಲ್ಲ ಮಗುವಿನ ಆಟಗಳನ್ನು ನೋಡುವುದರಲ್ಲಿ ಕಳೆದರೆ, ಈಗ ಅವಳಿಗೆ ಬಿಡುವೇ ಸಿಗದಷ್ಟು ಆಟ, ಚೇಷ್ಟೆಗಳನ್ನು ಮಾಡುವ ಹಂತಕ್ಕೆ ಮಗು ಬಂದಿತ್ತು. ಇದರ ನಡುವೆ, ಅವನಿಗೆ ಕಾಗದ ಬರೆಯುವ ಸಮಯವೂ ಅವಳಿಗೆ ಕೆಲವೊಮ್ಮೆ ಸಿಗುತ್ತಿರಲಿಲ್ಲ.  ಪ್ರತಿ ವಾರ ಬರುತ್ತಿದ ಗಂಡ ಈಗ ತಿಂಗಳಿಗೊಮ್ಮೆ ಬರಲು ಶುರು ಮಾಡಿದಾಗಲೂ ಅವಳು ಹೆಚ್ಚು ಯೋಚಿಸಲಿಲ್ಲ. ಅವನು ಊರಿಗೆ ಬಂದಾಗಲೂ, ಅವನ ಯೋಗಕ್ಷೇಮಕ್ಕಿಂತ, ಮಗುವಿನ ಆಟ ಪಾಠಗಳನ್ನು ಬಣ್ಣಿಸುವುದರಲ್ಲೇ ಅವಳು ಕಾಲ ಕಳೆಯುತ್ತಿದ್ದಳು. ಅವನೂ ಸಹ ಅವಳ ಉತ್ಸಾಹಕ್ಕೆ ಭಂಗ ತರದೇ ಎಲ್ಲವನ್ನೂ ಕೇಳುತ್ತಿದ್ದ. ತಿಂಗಳಿಗಾಗುವಷ್ಟು ದುಡ್ಡು ಅವಳಿಗೆ ನೀಡಿ, ಪಟ್ಟಣಕ್ಕೆ ಮರಳುತ್ತಿದ್ದ. 

ಮಗು ಕೌದಿಯ ಮೇಲೇ ಆಡಿ ಮಲಗುತ್ತಿದ್ದರಿಂದ, ನಿತ್ಯವೂ ಅದರ ಉಚ್ಚೆ, ಮಲಗಳನ್ನು ತೊಳೆದು, ಕೌದಿಯನ್ನು ಬಿಸಿಲಲ್ಲಿ ಅವಳು ಒಣಗಿಸುತ್ತಿದ್ದಳು. ಊರಿನವರಿಗೆ, ಅವಳ ಚೆಂದದ ಕೌದಿ ಬಣ್ಣ ಮಾಸಲು ಶುರುವಾಗುತ್ತಿದ್ದದ್ದು ಅರಿವಾಯಿತು. ಮಗುವಿನ ಪುಟ್ಟ ಬಟ್ಟೆಗಳು ಈಗ ಅವರ ಕೌದಿಯ ಭಾಗವಾಗಿದ್ದ ಕಾರಣ, ದೊಡ್ಡ ಬಟ್ಟೆಗಳು ಹಾಗು ಚಿಕ್ಕ ಬಟ್ಟೆಗಳ ನಡುವಿನ ಹೊಲಿಗೆಗಳು ಈಗ ಹೊರಕ್ಕೆ ಕಂಡುಬರುತ್ತಿದ್ದವು. ಎಂಥ ಒಳ್ಳೆಯ ಕೌದಿಯಾಗಿತ್ತು; ಹೀಗಾಯಿತಲ್ಲಾ ಎಂದು ಕೆಲವರು ಮರುಕಪಟ್ಟರೆ, ಅವರಲ್ಲಿ ಕೆಲವರಿಗೆ ಇದನ್ನು ಕಂಡು ಸಂತೋಷವೂ ಆಯಿತು. ಆದರೆ, ಇದಾವುದೂ ಅವಳ ಗಮನಕ್ಕೆ ಬರಲಿಲ್ಲ. ಅವಳ ಧ್ಯಾನವೆಲ್ಲ ಬೆಳೆಯುತ್ತಿದ್ದ ಅವಳ ಮಗುವಿನ ಮೇಲೆಯೇ ಇತ್ತು. 

                                                            ********************

ಮೂಗಿಗೆ ಬಡಿಯುತ್ತಿದ್ದ ಮಲ್ಲಿಗೆ ಹೂವಿನ ವಾಸನೆ ಅವಳನ್ನು ಎಚ್ಚರಿಸಿತು. ಸ್ವಲ್ಪ ಹೊತ್ತು ಏನೂ ತೋಚದವಳಾಗಿ, ಗಂಡ-ಮಗುವನ್ನು ನೋಡುತ್ತಾ ಕುಳಿತ ಅವಳು, ನಂತರ ಯಾರಿಗೂ ಕಾಣದಂತೆ ಮನೆಯ ಹಿತ್ತಲಿಗೆ ಹೋಗಿ, ಮಲ್ಲಿಗೆ ಹೂವಿನ ವಾಸನೆಯಿದ್ದ ಆ ಅಂಗಿಯನ್ನು ಹೂತು ಬಂದಳು. 

ಆ ರಾತ್ರಿ, ಅವಳಿಗೆ ಊಟವೂ ಸೇರಲಿಲ್ಲ. ಅವನು ಯಾಕೆಂದು ಕೇಳಿದಾಗ ಹಾರಿಕೆಯ ಉತ್ತರ ನೀಡಿದಳು; ಅವನೂ ಹೆಚ್ಚು ಒತ್ತಾಯ ಮಾಡಲಿಲ್ಲ. ಅವಳ ಮನಸಿನಲ್ಲಿ ನಡೆಯುತ್ತಿದ್ದ ಸಂಘರ್ಷಗಳು ಅವನಿಗೆ ಅರಿವಾದಂತಿರಲಿಲ್ಲ. ಮಾರನೆಯ ದಿನವೇ ಜಾತ್ರೆಯಾಗಿದ್ದರಿಂದ, ಬೆಳಗ್ಗೆ ಬೇಗ ಏಳಬೇಕೆಂದು, ಮಗುವನ್ನು ನಡುವೆ ಮಲಗಿಸಿ ಇಬ್ಬರೂ ಅಡ್ಡಗಾದರು. ಸ್ವಲ್ಪವೇ ಹೊತ್ತಿನಲ್ಲಿ ಅವನ ಗೊರಕೆಯೂ ಆರಂಭವಾಯಿತು. ಅಂದಿನವರೆಗೂ ಅವನ ಗೊರಕೆಯೂ ಅವಳಿಗೆ ಚೆಂದವಾಗಿ ಕೇಳುತ್ತಿತ್ತು. ಆದರೆ, ಈ ರಾತ್ರಿ ಅಸಹ್ಯವಾಯಿತು. 

ಅವನ ಗೊರಕೆಯಿಲ್ಲದಿದ್ದರೂ ಅವಳಿಗೆ ಆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಮಗು ನಿದ್ದೆಗೆ ಜಾರಿದ ಮೇಲು ಎಷ್ಟೋ ಹೊತ್ತು ತಟ್ಟುತ್ತಲೇ ಇದ್ದಳು. ತನ್ನ ಮುಂದಿನ ದಾರಿ ಏನು? ತನ್ನ ಬಳಿಯಿರುವ ಆಯ್ಕೆಗಳಾದರೂ ಏನು? ಇಷ್ಟಕ್ಕೂ, ತಾನು ಭಾವಿಸಿರುವುದು ನಿಜವೇ? ಎಂಬ ಪ್ರಶ್ನೆಯೂ ಕಾಡಿತು. ಆದರೆ, ಒಡೆದ ಚೂರುಗಳೆಲ್ಲ ಒಟ್ಟಿಗೆ ಸೇರುವಂತೆ, ಅವನು ತಿಂಗಳಿಗೊಮ್ಮೆ ಬರಲು ಶುರು ಮಾಡಿದ್ದು, ಅವಳು ಹೆಚ್ಚು ಗಮನ ಕೊಡದಿದ್ದರೂ ಏನು ಆಗದವನಂತೆ ಸುಮ್ಮನಿದ್ದದ್ದು, ಅವಳ ಮನಸ್ಸಿನ ಜಾಡನ್ನು ಮುಖನೋಡಿಯೇ ಕಂಡುಹಿಡಿಯುತ್ತಿದ ಅವನು ಇಂದು ಏನೂ ಅರಿಯದವನಾಗಿ ಮಲಗಿರುವುದು, ಆ ಮಲ್ಲಿಗೆಯ ವಾಸನೆ - ಇವುಗಳೆಲ್ಲ ಅವಳ ಅನುಮಾನವನ್ನೇ ಪೋಷಿಸಿದವು. 

ಇದೇ ಯೋಚನೆಯಲ್ಲಿ ಮುಳುಗಿದ್ದ ಅವಳಿಗೆ ನಿದ್ದೆ ಹತ್ತಿದ್ದೂ ಅರಿವಾಗಲಿಲ್ಲ. ಅವಳು ಅಂಗಿಯನ್ನು ಹೂತಿದ್ದ ಜಾಗದಲ್ಲೇ ಒಂದು ಮಲ್ಲಿಗೆಯ ಗಿಡ ಸೊಂಪಾಗಿ ಬೆಳೆದಿತ್ತು. ತನ್ನ ಜಡೆಗೆ ಆಗುವುದೆಂದು ಆ ಹೂವುಗಳನ್ನು ಬಿಡಿಸಲು ಅವಳು ಹೋದಾಗ, ಹಾವೊಂದು ಬುಸುಗುಡುವಂತೆ ಭಾಸವಾಯಿತು. ಹಾವನ್ನು ಎದುರಿಸಲು ಅವಳು ಕೌದಿಯನ್ನು ಅದರ ಮೇಲೆ ಎಸೆದರೆ, ಆ ನಾಗರ ಹಲ್ಲುಗಳು ಕೌದಿಯನ್ನೇ ಹರಿದು, ಮತ್ತೆ ಹಾವು ಅವಳ ಹಿಂದೆ ಹರಿದು ಬಂತು. ತಪ್ಪಿಸಿಕೊಂಡು ಓಡುತ್ತಿದ್ದ ಅವಳು ಹಿಂದಿರುಗಿ ನೋಡಿದರೆ, ಅವನು ಸಹಾಯಕ್ಕೆ ಬಾರದೆ, ಮಗುವನ್ನೂ ಎತ್ತಿಕೊಂಡು, ನಗುತ್ತಾ ನಿಂತಿದ್ದ....ನಿದ್ದೆಯಲ್ಲಿ ಮಗು ಹೊರಳಾಡಿದಾಗ, ಅದರ ಕಾಲು ತಾಗಿ, ಅವಳಿಗೆ ಎಚ್ಚರವಾಯಿತು. 

ಜಾತ್ರೆಗೆ ಹೋದಾಗಲೂ, ಅಷ್ಟು ಜನರ ನಡುವೆಯೂ, ಅವಳು ತನ್ನದೇ ಲೋಕದಲ್ಲಿ, ತನ್ನ ಮುಂದಿದ್ದ ಆಯ್ಕೆಗಳ ನಡುವಿನ ಹಗ್ಗಜಗ್ಗಾಟದಲ್ಲಿ ನಿರತಳಾಗಿದ್ದಳು. ಏನೂ ಮಾಡದೇ ಸುಮ್ಮನೆ ಇರುವುದು ಅವಳಿಗೆ ಸಾಧ್ಯವಿರಲಿಲ್ಲ - ಮುಂದೊಂದು ದಿನ, ಹೇಳದೇ ಕೇಳದೇ, ಆ ಮತ್ತೊಬ್ಬಳನ್ನು ಇಲ್ಲಿಗೇ ಕರೆತಂದು, ತನ್ನನ್ನು ಹೊರಹಾಕಿದರೆ?   'ನಾನು ಮಗುವಿಗೆ ಹೆಚ್ಚು ಗಮನ ನೀಡಿದ್ದೇ ತಪ್ಪೇ? ಆದರೆ, ಮಗು ನಮ್ಮಿಬರದೂ ಅಲ್ಲವೇ? ಅಷ್ಟಾಗಿಯೂ, ಅವನಿಗೆ ಹಾಗೆ ಅನಿಸಿದ್ದರೆ, ನನಗೇ ಹೇಳಬಹುದಿತ್ತು. ಈಗೇನು ಮಾಡಲಿ?' ಹಣ್ಣು ಕಾಯಿ ಮಾಡಿಸಲು ಅವರು ತಂದಿದ್ದ ಸಾಮಾನುಗಳನ್ನು ಅವನಿಗೆ ನೀಡಿದಳು. 'ಅವನನ್ನೇ ನೇರವಾಗಿ ಕೇಳಿದರೆ?' ಎಂಬ ಆಲೋಚನೆಯೂ ಸುಳಿಯಿತು. ಅದರ ಹಿಂದೆಯೇ 'ಗಂಡು ಎನ್ನುವ ಅಹಂಕಾರದಲ್ಲಿ ಮಾಡಿದ್ದನ್ನು ಅವನು ಸಮರ್ಥಿಸಿಕೊಳ್ಳುತ್ತಾನೆ. ತಪ್ಪೆಲ್ಲಾ ನನ್ನದೇ ಎನ್ನುವ ಹಾಗೆ ಮಾಡಿಬಿಡುತ್ತಾನೆ. ಎಷ್ಟೇ ಆಗಲಿ, ಮಾತಲ್ಲಿ ಚತುರನಲ್ಲವೇ ಅವನು?' ಈ ಹಿಂದೆ, ಅವನ ಮಾತುಗಳನ್ನು ಕೇಳಿ ಅದೆಷ್ಟು ಬಾರಿ ಸಂತೋಷಿಸಿದ್ದಳೋ. ಈಗ, ಆ ಮಾತುಗಳ ಬಗ್ಗೆ ತಾತ್ಸಾರ ಮೂಡಿತು. 'ಅಥವಾ, ತನ್ನ ಸತ್ಯ ಬಯಲಾಯಿತು ಎಂದು ತಿಳಿದು, ನನ್ನನ್ನೂ, ಮಗುವನ್ನೂ ಬಿಟ್ಟು ಆ ನನ್ನ ಸವತಿಯ ಬಳಿಗೇ ಹೊರಟುಹೋದರೆ?' ಈ ಮಾರ್ಗವೂ ಸೂಕ್ತವಲ್ಲ ಎನಿಸಿತು.  ಬರುತ್ತಿದ್ದ ಆರತಿ ತಟ್ಟೆಗೆ ಎರಡು ರೂಪಾಯಿ ಹಾಕಿ, ಮಂಗಳಾರತಿಯನ್ನು ಸ್ವೀಕರಿಸಿದಳು. 'ನನಗೂ ಒಂದು ತವರೆಂದು ಇದ್ದಿದ್ದರೆ...' ಎಂದು ನಿಟ್ಟುಸಿರು ಬಿಡುತ್ತಾ, ಮಗುವಿನ ಹಣೆಗೆ ದೇವರ ಕುಂಕುಮವಿಟ್ಟ ಅವಳಿಗೆ, ತನ್ನ ಇಡೀ ಜೀವನದಲ್ಲಿ ಎಂದೂ ಕಾಡಿರದ ಏಕಾಂಗಿತನ ಒಮ್ಮೆಲೇ ಅಪ್ಪಳಿಸಿತು. ಅನಾಥಳಾಗೇ, ಒಬ್ಬಂಟಿಯಾಗೇ ಇದ್ದಿದ್ದರೆ ಪ್ರಾಯಶಃ ಅವಳಿಗೆ ಹೀಗನಿಸುತ್ತಿರಲಿಲ್ಲವೇನೋ. ಆದರೆ, ತನ್ನದು ಎಂದು ಭಾವಿಸಿದ ಎರಡೇ ಎರಡು ಜೀವಗಳಲ್ಲಿ, ಒಬ್ಬ ತನ್ನನ್ನು ತೊರೆದು ಹೋಗುತ್ತಿದ್ದಾನೆ ಎನ್ನುವಾಗ, ಅವಳೆಂದೂ ಅನುಭವಿಸಿರದ ಆ ಅನಾಥಪ್ರಜ್ಞೆ ಅವಳಿಗೆ ಭಾರವಾಯಿತು.

ಅವಳ ಕೈ ಹಿಡಿದು, ಇನ್ನೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಅವನು ರಥದ ಕಡೆಗೆ ಸಾಗುತ್ತಿದ್ದ. 'ಅವನನ್ನೂ, ಮಗುವನ್ನೂ ಬಿಟ್ಟು ಹೊರಟುಹೋಗಲೇ? ಹಾ! ಜಾತ್ರೆಯಲ್ಲಿ, ಈ ಜನ ಜಂಗುಳಿಯಲ್ಲಿ, ತಪ್ಪಿಸಿಕೊಂಡಳು ಅನಿಸುವಂತೆ ಹೋಗಬಹುದಲ್ಲಾ...'  ರಥದಲ್ಲಿ  ಉತ್ಸವಮೂರ್ತಿಯನ್ನು ಕೂರಿಸಿ, ಅಲಂಕಾರ ಮಾಡಿದ ಮೇಲೆ, ಅದಕ್ಕೆ ಕಟ್ಟಿದ್ದ ಪರದೆಯನ್ನು ಸರಿಸಿದೊಡನೆ, ಅಲ್ಲಿ ನೆರೆದಿದ್ದ ಜನರೆಲ್ಲಾ 'ಹೋ!' ಎಂದು ಕೂಗಿದರು. 'ನಾನು ಹೊರಟುಹೋದ ಮೇಲೆ, ಮಗುವನ್ನು ಆ ನನ್ನ ಸವತಿ ಹೇಗೆ ನೋಡಿಕೊಂಡಾಳೋ? ನನ್ನಂತೆ, ಅವನಂತೆ ಅನಾಥರಾಗಿ ಬೆಳೆಯಬಹುದು. ಆದರೆ, ಮಲಮಕ್ಕಳಾಗಿ ಬೆಳೆಯುವ ಪಾಡು ಬೇಡ' ಎಂದುಕೊಂಡು, ಆ ಮಾರ್ಗವನ್ನೂ ತಿರಸ್ಕರಿಸಿದಳು. ಅಲ್ಲದೆ, ದೊಡ್ಡವನಾದ ಮೇಲೆ, ತನ್ನ ಮಗುವಿಗೆ ಸತ್ಯ ತಿಳಿದು, ತನ್ನ ತಾಯಿ ಹೇಡಿಯಂತೆ ಸಮಸ್ಯೆಯಿಂದ ಓಡಿಹೋದಳು ಎಂದು ಭಾವಿಸಿದರೆ?  ಸೂರ್ಯನ ಬೆಳಕಿನಲ್ಲಿ ದೇವರ ಬೆಳ್ಳಿಯ ವಿಗ್ರಹ ಹೊಳೆಯುತ್ತಿತ್ತು. ಅವಳ ಕಣ್ಣಲ್ಲಿ ತುಂಬುತ್ತಿದ್ದ ನೀರು ತನ್ನದೇ ಆದ ಹೊಳಪನ್ನು ನೀಡಿತ್ತು. 'ನೀನೆ ಕಾಪಾಡಬೇಕು' ಎಂದು ದೈನ್ಯದಿಂದ ಕೈಮುಗಿದಳು. 

ಅಂದು ಊರಿನವರಿಗೆ, ಭಕ್ತರಿಗೆಲ್ಲಾ ದೇವಸ್ಥಾನದಲ್ಲೇ ಊಟ. ಅಲ್ಲಿ ಹುರುಪಿನಿಂದ ಓಡಾಡುತ್ತಿದ್ದವರನ್ನು ಕಂಡು ಅವಳಿಗೆ ಹಳೆಯದೆಲ್ಲಾ ನೆನಪಾಯಿತು. ಆಗಷ್ಟೇ ಮದುವೆಯಾಗಿದ್ದ ಹೊಸ ಜೋಡಿಗಳನ್ನು ಕಂಡು ಅವಳಿಗೆ ಅಸೂಯೆಯಾಯಿತು. ಆ ಅಸೂಯೆಯ ಅಡಿಯಲ್ಲೇ, ಕಡೆಗೂ ಒಂದು ದಾರಿ ಕಂಡಿತು. ತನ್ನ ಸಮಸ್ಯೆಯನ್ನು ಖಾಯಂ ಆಗಿ ನಿವಾರಿಸದಿದ್ದರೂ, ಸಧ್ಯಕ್ಕೆ ಅವಳಿಗೆ ಅದಕ್ಕಿಂತ ಉತ್ತಮ ಉಪಾಯ ಕಾಣಲಿಲ್ಲ. ಅವಳ ನೆಚ್ಚಿನ ಕೌದಿ ಮುಳ್ಳಿನ ಮೇಲೆ ಬಿದ್ದಂತಾಗಿತ್ತು. ಬಹಳ ನಾಜೂಕಾಗಿ ಅದನ್ನು ತನ್ನತ್ತ ಎಳೆಯಬೇಕಿತ್ತು. ಇಲ್ಲವಾದಲ್ಲಿ, ಅಷ್ಟು ವರ್ಷಗಳ ಪರಿಶ್ರಮ ಹರಿದು ಚೂರಾಗುತ್ತಿತ್ತು. 

ಆ ರಾತ್ರಿ, ಊಟವಾದ ಮೇಲೆ, ಮಗುವನ್ನು ಮಲಗಿಸಿ, ಅವನಿಗೆ ಎಲೆಯಡಿಕೆಯನ್ನು ಮಡಿಸಿಕೊಡುತ್ತಾ ಅವಳು ತಿಂಗಳುಗಳ ಮುಂಚೆ ಕಂಡ ಆ ಕನಸಿನ ಬಗ್ಗೆ ಅವನಿಗೆ ಹೇಳತೊಡಗಿದಳು. ಅವನಿಗಾಗಾಲೇ ಎಷ್ಟೋ ಬಾರಿ ಆ ಕನಸನ್ನು ಹೇಳಿದ್ದರೂ, ಈ ಬಾರಿ ಹೊಸತೆಂಬಂತೆ ಬಣ್ಣಿಸಿದಳು. ಅವರ ಮೂರು ಮಕ್ಕಳ ಬಗ್ಗೆ... ಕೌದಿಯನ್ನು ನಾಲ್ಕು ಭಾಗ ಮಾಡಿದ್ದು...ಮಕ್ಕಳು ಸೊಸೆಯಂದಿರು ಕೌದಿಯನ್ನು ಮುಂದುವರೆಸಿದ್ದು...ಮೊಮ್ಮಕ್ಕಳು...ಮರಿಮಕ್ಕಳು....ಎಲ್ಲವನ್ನೂ ಹೇಳಿದಳು.... 

ಮಾರನೆಯ ದಿನ, ಎಂದಿನಂತೆ, ಕೌದಿಯನ್ನು ಒಗೆದು, ಬಿಸಿಲಿಗೆ ಹರವಿದಳು. ಕೌದಿಗೆ ಹೊಸ ಕಳೆ ತುಂಬಿ, ರಂಗೇರಿತ್ತು. 











Friday, November 15, 2019

Yours Whimsically – Part 23: On ‘minding’ the class and more…


One of my favorite pastimes these days is to travel into an imagined future, where I’m a popular and successful public figure. In my autobiography and in talks at events, I often dwell upon events which ‘shaped my success story’, those ‘inflection points’ and such jargon. So, what I am going to tell you today, Reader, is born out of such reflections….er, musings, rather.

‘Back when we were children’, it was popular and preferred among teachers to select class leader/s. ‘Class leaders’ were never ‘class representatives’ because of the way they were chosen, especially in primary school. In the absence of better evidence/parameters, our teachers chose those who scored well to be leaders. These students were again chosen, more often than not, to participate in extra-curricular events. By the time we were old enough for our social skills & leadership abilities to be gauged, these ‘leaders’, with a head-start of 2-3 years, would become default choices. A small consolation in the entire process was that even though the leaders themselves were not entirely representative, very often, our teachers ensured there was atleast one girl leader, thus implementing 33% reservation long before our legislators even thought of it.

The primary function of the class leaders was to ‘mind’ the class and ensure silence, or tolerable levels of noise, whenever the teachers were absent, or had any other immediate work to attend to, or simply preferred to take a nap! The last one was the riskiest proposition, because in case the noise woke her up – I use ‘her’ because we hardly had any male faculty in our school then, except for the universal ‘P.T’ – it was the leaders who were first in the line of fire, not to mention their loss of face in front of the class. This was the best way to settle personal scores with a leader you didn’t like!

The leaders went about their task by writing the names of culprits on the blackboard. However, here, one of the leaders encountered an issue – how to deal with those who repeat the crime? If a first timer and a habitual offender get the same punishment, people would lose faith in the system. It was escalated and a meeting of leaders across sections and across years was held to discuss this quandary. One of the more ingenious members in the meeting came up with the idea of adding a ‘+1’ against the name! Along with it came the idea of ‘pardon’ and ‘remission’ of punishment, by erasing ‘+1’s and names for good behaviour. That day, so the legend goes, the seniors gave that particular leader a treat of bhel puri from the cart stationed outside school.

Favoritism and influence were prevalent even in primary and middle school. If you were a close friend of the leader/s, s/he was far more lenient and your name hardly made it to the blackboard. Even on those rare occasions when it did, the name would magically disappear just when the teacher was about to punish them. You could even make deals with the leader/s: for a couple of extra toffees on your birthday, you could purchase the goodwill and friendship of the leader, thus ensuring your name was never written. Power corrupts.

This system was flawed at many levels. Though based on skills, it led to the concentration of authority and opportunity in the hands of a select few, widening the gap between them and the rest – pretty much like capitalist societies. Naturally, the proletariats were unhappy at such an arrangement and wanted change. So, it was in Class 8, if I remember correctly, that our teacher experimented with the idea of “leadership on rotation”, thus distributing power among a wider section of students. The idea lost steam after a few months, because people came to realize that ‘minding the class’ was a thankless job and more of a pain.

Class 7 & 8 was also the time when we became more aware and conscious of the people around us, especially about those of the opposite sex. Rumors of who had a crush on who, across sections, started doing the rounds. Random girls were paired with random boys and “FLAMES-tested”. We never really cared if the persons whose names were invoked were embarrassed by it. However, sometimes, these young men and women enjoyed it, even subtly encouraging their friends for more. The leader/s derived some perverse sort of enjoyment, much to our giggles, by writing the names of that boy and this girl next to one another, while minding the class. Most of our teachers never understood why so many people were sniggering. Or did they only pretend to not understand?

This system of class leaders ended in Class 8, for in 9th and 10th, we were expected to be “mature enough to mind ourselves”. Moreover, captains and vice-captains for the school as well as the various houses would be elected from these two batches. Having an alternate authority within the class would lead to a ‘constitutional crisis’, like in Delhi today! However, I think there was another reason at play there: it is the age when the adolescent ego sprouts, which does not want to bow before any authority, let alone peers. Lack of a class leader was, hence, a prudent decision.

It was in Classes 9 & 10 that we had the true taste and test of power, however minimal. Class 9 was a metaphorical coming off age moment, because the school vice-captains were expected to outgrow differences of opinion and work with students across sections in the batch. Every year, while Class 10 students organized Teachers’ Day celebrations, it was the responsibility of the vice-captains and their team to “mind all classes” – from Class 1 to Class 8 – in the second half of the day.

Until Class 8, I genuinely looked at those seniors who came to our class as figures of authority who were to be respected. Enter the vice-captain, with an entourage of two or three people. The halo around these seniors dimmed in front of the aura of the vice-captain! Surely, the position of the vice-captain must be of great significance and power? Or was it the intrinsic awe for hierarchy that made it look so grand? Or was the vice-captain making an extra effort to stamp his importance, especially if his crush was present? Strange as it may seem, I don’t remember any female vice-captain trying such gimmickry. Perhaps they were more self-assured and secure.

I was in Class 3 when my brother was Vice-Captain. On Teachers’ Day that year, like all Vice- Captains before and after him, he was gracing all classes with his presence. When he came to my class, for whatever reason, my brother decided to walk upto me and warn me – absolutely without any reason – for the whole class to see.  Maybe he wanted to be revered as a paragon of impartiality - ‘Oh! Look at him. He does not  favor even his brother!’ Maybe he just wanted to showcase his authority. Maybe he was just settling personal scores for some fight back home. When I ask him now about what he was actually trying to achieve that day, he, conveniently and along expected lines, does not remember the incident at all!

Class 10 was more about minding our conduct. Especially as captains and vice-captains of various houses, we were repeatedly told by our teachers – directly and indirectly – that our juniors and peers looked to us as examples. Yet, even under such constraints, some of us managed to bunk classes in the name of organizing or participating in events, backing each other up everytime. We were busy creating memories, you see.  Power, indeed, corrupts!

I don’t remember if we had class leaders or representatives in PU/+2 levels, simply because I spent a significant amount of time not attending classes! In college, there was a paradigm shift in the concept of class representatives. Because it was a national institute, ‘representation’ and ‘leadership’ took a whole new connotation, leading to some interesting events over the course of five years. However, more on it some other day…

Monday, March 25, 2019

ಊರ್ಮಿಳೆ

ಈಗ ಕೆಲವು ವರ್ಷಗಳಿಂದ ಸರಯೂ ನದಿಯ ತೀರದಲ್ಲೇ ಊರ್ಮಿಳೆ ಒಂದು ಸಣ್ಣ ಪರ್ಣಕುಟಿಯನ್ನು ನಿರ್ಮಿಸಿಕೊಂಡು, ಸನ್ಯಾಸಿನಿಯಂತೆ ವಾಸವಾಗಿದ್ದಳು. ರಾಮಚಂದ್ರನ ಆಜ್ಞೆ, ಲಕ್ಷ್ಮಣನ ಅಪೇಕ್ಷೆ: ದಿನವೂ ಅವಳಿಗೆ ಅರಮನೆಯಿಂದಲೇ ಊಟ ತರುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ, ಅವಳ ನಿತ್ಯ ಪೂಜೆಗೆ ಹೂಗಳನ್ನು, ನೈವೇದ್ಯಕ್ಕೆ ಹಣ್ಣುಗಳನ್ನು ಸಹ ಅರಮನೆಯ ಉದ್ಯಾನದಿಂದಲೇ ಕಳುಹಿಸಲಾಗುತ್ತಿತ್ತು. ಅವನ್ನು ತರುವ ಪರಿಚಾರಕಿಯರೊಡನೆ ಒಂದೆರಡು ಮಾತಾಡಿ ಊರ್ಮಿಳೆ ಅರಮನೆಯ ಸಮಾಚಾರವನ್ನು ತಿಳಿದುಕೊಳ್ಳುತ್ತಿದ್ದಳು. ಹಾಗೆ ಅಲ್ಲವೇ ಅವಳ ಅತ್ತೆ ಸುಮಿತ್ರೆ ತೀರಿಹೋದ ಸುದ್ದಿ ತಿಳಿದದ್ದು? ಅರಮನೆಗೆ ಹೋಗಿ ತಾಯಿಯಂಥ ಆ ಮಹಾತಾಯಿಯನ್ನು ನೋಡುವ ಮನಸ್ಸಾದರೂ, ಊರ್ಮಿಳೆ ತಡೆದಿದ್ದಳು. ಆದರೆ, ಅವರ ನೆನಪಿನಲ್ಲಿ, ಹದಿಮೂರು ದಿನಗಳ ಕಾಲ ಕೇವಲ ಒಂದು ಹೊತ್ತು ಊಟ ಮಾಡಿದ್ದಳು. ಊರ್ಮಿಳೆ ಅರಮನೆಯನ್ನು ತೊರೆದೂ ತೊರೆಯದವಳಾಗಿದ್ದಳು.

ಅಂದು ಬೆಳಗ್ಗೆ ಅದೇಕೋ ಊರ್ಮಿಳೆಗೆ ಹೇಳಲಾರದ ತಳಮಳ. ಏನೇನೋ ಅಪಶಕುನಗಳು. ಧ್ಯಾನಕ್ಕೆ ಕುಳಿತರೂ ಮನಸ್ಸು ಒಂದೆಡೆ ನಿಲ್ಲದು. ಅದೇ ಹಳೆಯ ನೆನಪುಗಳು. ಎಂದೂ ಇಲ್ಲದೆ, ಇಂದೇಕೆ ಒತ್ತರಿಸಿ ಬರುತ್ತಿದ್ದವೋ? ಧ್ಯಾನ, ಪೂಜೆಗಳನ್ನು ಬಿಟ್ಟು ಊರ್ಮಿಳೆ ತನ್ನ ಬದುಕನ್ನು ಅವಲೋಕಿಸುತ್ತಾ ಕುಳಿತಳು.

ಬಾಲ್ಯದ ನೆನಪುಗಳು ಮಸುಕಾಗುವಷ್ಟು ವಯಸ್ಸಾಗಿತ್ತು ಅವಳಿಗೆ. ಅದೂ ಅಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೇ, ಅಕ್ಕ ಸೀತೆಯೊಡನೆ ಅವಳಿಗೂ, ತನ್ನ ಚಿಕ್ಕಪ್ಪನ ಮಕ್ಕಳಿಗೂ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದರು. 'ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಇನ್ನು ನಿಮ್ಮ ಸುಖಕ್ಕೆ ಎಣೆಯುಂಟೆ?' ಎಂದು ಗೆಳತಿಯರು ಹೇಳುವಾಗ ಇವಳಿಗೂ ರೋಮಾಂಚನವಾಗಿತ್ತು. ಲಕ್ಷ್ಮಣನನ್ನು ಕಂಡ ಕೂಡಲೇ ಮನಸೋತಿದ್ದಳು. ಲಕ್ಷ್ಮಣನೇನೋ ಸ್ಫುರದ್ರೂಪಿಯೇ. ಆದರೆ, ಅವಳಾಗಿಯೇ ಮರುಳಾದಳೋ ಅಥವಾ ಅವಳ ಗೆಳತಿಯರ ಮಾತು ಕೇಳಿ ಹಾಗಾಯಿತೋ ಎಂದು ಊರ್ಮಿಳೆಗೆ ಅಂದಿಗೂ ತಿಳಿದಿರಲಿಲ್ಲ. ಇಂದಿಗೂ ತಿಳಿದಿಲ್ಲ. ಅದಕ್ಕೇ ಇರಬೇಕು, ಮನಸ್ಸು ಮರ್ಕಟ ಎಂದು ತಿಳಿದವರು ಹೇಳುವುದು.

ತವರಿಗೆ ವಿದಾಯ ಹೇಳಿದಾಗಲೂ ಅವಳಿಗೆ ಹೆಚ್ಚು ದುಃಖವಾಗಿರಲಿಲ್ಲ. ಏಕೆಂದರೆ, ಅವಳ ಅಕ್ಕ ಸೀತೆ, ಮಾಂಡವಿ, ಶ್ರುತಕೀರ್ತಿಯರೆಲ್ಲರೂ ಮೊದಲಿನಂತೆ ಈಗಲೂ ಜೊತೆಯಲ್ಲಿರುವರು. ಅಲ್ಲದೆ, ತಂದೆಯಂತೇ ಪ್ರೀತಿಯಿಂದ ಕಾಣುವ ಮಹಾರಾಜ ದಶರಥ; ಮೂರು ಜನ ಅತ್ತೆಯರೂ ಕೂಡ ಅಕ್ಕರೆಯಿಂದಲೇ ಕಾಣುವರು. ಹೊಸದಾಂಪತ್ಯ. ಲಕ್ಷ್ಮಣನೂ ಅವಳನ್ನು ಅತ್ಯಂತ ಪ್ರೀತಿ, ಪ್ರೇಮಗಳಿಂದ ಕಾಣುತ್ತಿದ್ದ. ಅವಳ ಗೆಳತಿಯರ ಮಾತಿನಲ್ಲಿ ನಿಜವಿತ್ತು. ಲಕ್ಷ್ಮಣನಿಗೆ ಮುಂಗೋಪ ಹೆಚ್ಚು ಎನ್ನುವುದೊಂದನ್ನು ಬಿಟ್ಟರೆ, ಅಯೋಧ್ಯೆಯಲ್ಲಿ ಅವಳಿಗೆ ಯಾವ ತೊಂದರೆಯೂ ಇದ್ದಂತಿರಲಿಲ್ಲ. ರಾಜ್ಯವನ್ನು ಭಾಗ ಮಾಡಿ ತಮ್ಮ ಪಾಡಿಗೆ ತಾವು ಹೋಗಬೇಕೆಂದು ಊರ್ಮಿಳೆಗೆ ಎಂದೂ ಅನಿಸಿರಲಿಲ್ಲ. ಅನಿಸಿದ್ದರೂ ಅದು ಸಾಧ್ಯವಿಲ್ಲ ಎಂಬುದನ್ನು ಲಕ್ಷ್ಮಣನಲ್ಲಿ ರಾಮನ ಬಗ್ಗೆ ಇದ್ದ ಭಕ್ತಿ ಗೌರವಗಳನ್ನು ಕಂಡು ಅರಿತಿದ್ದಳು.

ಆ ಸುಖ ಸಂತೋಷಗಳೆಲ್ಲ ಕೆಲವು ವರ್ಷಗಳು ಮಾತ್ರ. ವನವಾಸ ಒದಗಿದ್ದು ಭಾವ ರಾಮನಿಗೆ. ಮೂರಾಬಟ್ಟೆಯಾಗಿದ್ದು ಮಾತ್ರ ಊರ್ಮಿಳೆಯ ಬದುಕು. ರಾಮ ಕಾಡಿಗೆ ಹೊರಟು ನಿಂತಾಗ, ಅಕ್ಕ ಸೀತೆಯೂ ಹೊರಟಳು. ರಾಮನಿದ್ದೆಡೆ ಲಕ್ಷ್ಮಣ. ಅವನೊಂದಿಗೆ ತಾನು ಎಂದು ಊರ್ಮಿಳೆಯೂ ಸಿದ್ಧವಾದಳು. ಅಂದು ಅಂತಃಪುರದಲ್ಲೆಲ್ಲಾ ಬಿಗುವಿನ ವಾತಾವರಣ ಮೂಡಿದ್ದು ಊರ್ಮಿಳೆಗೆ ಇನ್ನೂ ನೆನಪಿದೆ. ಸಖಿಯರ ನಡುವೆ ಗುಸುಗುಸು ಮಾತು. ಇವಳು ಕರೆದು ಕೇಳಿದ್ದಳು. ರಾಮ ಕಾಡಿಗೆ ಹೊರಟಿರುವುದನ್ನು ಕೇಳಿ ಲಕ್ಷ್ಮಣ ಮಹಾರಾಜ ದಶರಥ, ಕೈಕೇಯಿಯರನ್ನು ತೀರಿಸಲು ಹೊರಟನಂತೆ! ರಾಮ ಅವನನ್ನು ತಡೆದು ತಿಳುವಳಿಕೆ ಹೇಳಿದನಂತೆ. ಬುದ್ಧಿ ಸ್ಥಿಮಿತಕ್ಕೆ ಬಂದ ಮೇಲೆ ತನ್ನ ನಿರ್ಧಾರಕ್ಕೆ ಹೇಸಿ, ಲಕ್ಷ್ಮಣ ತನ್ನ ತಲೆಯನ್ನೇ ಕಡಿದುಕೊಳ್ಳಲು ಮುಂದಾದನಂತೆ. ಆಗಲೂ ರಾಮ ತಡೆದು ಸಮಚಿತ್ತತೆಯನ್ನು ಬೋಧಿಸಿದನಂತೆ. ಈ ಅಂತೇ-ಕಂತೆಗಳ ನಡುವೆ ಊರ್ಮಿಳೆ ಬೆಚ್ಚಿ, ತನ್ನ ಇಷ್ಟದೇವರುಗಳನೆಲ್ಲಾ ಪ್ರಾರ್ಥಿಸಿದ್ದಳು.

ಬಿರುಸಿನಲ್ಲೇ ಅಂತಃಪುರಕ್ಕೆ ಬಂದ ಲಕ್ಷ್ಮಣನಿಗೆ ನಯವಾಗಿ, ಅವರೊಂದಿಗೆ ತಾನೂ ವನವಾಸಕ್ಕೆ ಬರುತ್ತೇನೆ ಎಂದು ಊರ್ಮಿಳೆ ಕೇಳಿಕೊಂಡಳು. ಆದರೆ ಲಕ್ಷ್ಮಣ ಒಪ್ಪದೇ, ಅತ್ತೆ-ಮಾವನನ್ನು ನೋಡಿಕೊಳ್ಳುವ ಜವಾಬುದಾರಿ ಅವಳದ್ದೆಂದು ಖಡಾಖಂಡಿತವಾಗಿ ನುಡಿದುಬಿಟ್ಟ. ಅವನ ಮುಂಗೋಪಕ್ಕೆ ಹೆದರಿ, ಊರ್ಮಿಳೆ ಮರುಮಾತಾಡುವ ಧೈರ್ಯ ಮಾಡದೆ, ಗಂಟಲಲ್ಲೇ ತನ್ನ ಮಾತುಗಳನ್ನು, ಹೃದಯದಲ್ಲಿ ತನ್ನ ಭಯ-ಪ್ರೀತಿಗಳನ್ನು ಅದುಮಿಟ್ಟುಕೊಂಡಳು. ಇವರ ಈ ನಿರ್ಧಾರವನ್ನು ತಿಳಿದ ಗುರು ವಸಿಷ್ಠರು ಲಕ್ಷ್ಮಣ ಕಾಡಿಗೆ ಹೊರಡುವ ಮೊದಲು ಇಬ್ಬರನ್ನೂ ತಮ್ಮ ಆಶ್ರಮಕ್ಕೆ ಕರೆದು,  ಗೌಪ್ಯವಾಗಿ ಮಂತ್ರವೊಂದನ್ನು ಬೋಧಿಸಿದ್ದರು. ಆ ಮಂತ್ರದ ಪ್ರಭಾವದಿಂದ ನಡುವೆ ಹದಿನಾಲ್ಕು ವರ್ಷಗಳೇ ಸಾಗಿದರೂ, ಇಬ್ಬರಿಗೂ ಒಂದಿನಿತೂ ವಯಸ್ಸಾಗುವುದಿಲ್ಲ ಎಂದು ವಸಿಷ್ಠರು ಆಶ್ವಾಸನೆ ನೀಡಿದ್ದರು. ಸಂಸಾರದ, ರಾಜ್ಯದ ಸುಖಭೋಗಗಳನ್ನು ಕೂಡಿ  ಅನುಭವಿಸಬೇಕಾದ ವಯಸ್ಸಿನಲ್ಲಿ ಈ ಅಗಲಿಕೆ ಒದಗಿತಲ್ಲಾ ಎಂದು ತಾಯಿ ಅರುಂಧತಿ ಇವಳಿಗೆ ಕುಂಕುಮಕೊಟ್ಟು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದರು.

ರಾಮ-ಸೀತೆಯರೊಂದಿಗೆ ಲಕ್ಷ್ಮಣ ಕಾಡಿಗೆ ಹೊರಟರೆ, ಇತ್ತ ಊರ್ಮಿಳೆಯ ವನವಾಸ ಆರಂಭವಾಯಿತು. ಕೆಲವೇ ದಿನಗಳಲ್ಲಿ ದಶರಥ ಮಹಾರಾಜ ತೀರಿಕೊಂಡ. ನಂತರದ ದಿನಗಳಲ್ಲಿ ಗುರು ವಸಿಷ್ಠರು ತಾಯಿ ಕೌಸಲ್ಯೆ-ಸುಮಿತ್ರೆಯರಿಗೆ ಪ್ರವಚನ ನೀಡಲು ಆಗಾಗ ಬರುತ್ತಿದ್ದರು. (ಕೈಕೇಯಿ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ, ರಾಮ ಬರುವವರೆಗೂ ಊರ ಹೊರಗಡೆ ವಾಸವಾಗಿರಲು ನಿರ್ಧರಿಸಿದ್ದಳು). ಊರ್ಮಿಳೆಯೂ ಸಹ ತನ್ನ ಅತ್ತೆಯೊಂದಿಗೆ ಆ ಪ್ರವಚನಗಳನ್ನು ಕೇಳುತ್ತಿದ್ದಳು. ಅದರ ಪ್ರಭಾವವೋ? ಅಥವಾ ಆ ಮಂತ್ರದ ಪರಿಣಾಮವೋ? ದೇಹಕ್ಕೆ ಮುಪ್ಪು ಬರದಿದ್ದರೂ ಊರ್ಮಿಳೆಯ ಆಸೆ, ಆಕಾಂಕ್ಷೆ, ಕನಸು, ಕಾಮನೆಗಳೆಲ್ಲಾ ಹಿಂಬದಿಗೆ ಸರಿದವು. ಅರಮನೆಯಲ್ಲೇ ಇದ್ದು ಎಲ್ಲವನ್ನು ತೊರೆದವಳಂತಾಗಿದ್ದಳು.

ಆ ಹದಿನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಅವಳಿಗೆ ಲಕ್ಷ್ಮಣನನ್ನು ಕಾಣಬೇಕೆಂದನಿಸಿರಲಿಲ್ಲ. ವನವಾಸ ಮುಗಿಸಿ ಅವರೆಲ್ಲ ಅಯೋಧ್ಯೆಗೆ ವಿಜಯಿಗಳಾಗಿ ಬರುತ್ತಿದ್ದಾರೆ ಎಂದು ನಗರಕ್ಕೆ ನಗರವೇ ಸಂಭ್ರಮಿಸುತ್ತಿರುವಾಗಲೂ ಊರ್ಮಿಳೆ ಉದ್ರೇಕಕ್ಕೆ ಒಳಗಾಗಲಿಲ್ಲ. ಲಕ್ಷ್ಮಣನ ಆಗಮನದ ನಿರೀಕ್ಷೆಯಲ್ಲಿ ಅಂತಃಪುರವನ್ನು ಸಖಿಯರು ಸಿಂಗರಿಸುವಾಗ ತನಗೆ ಸಂಬಂಧವಿಲ್ಲದವಳಂತೆ ಊರ್ಮಿಳೆ ಕಿಟಕಿಯಿಂದ ಹೊರನೋಡುತ್ತಿದ್ದಳು. ಅವಳಿಗೆ ಅಲಂಕಾರ ಮಾಡುವಾಗಲೂ ಕೂಡ, ಯಾಂತ್ರಿಕವಾಗಿ ತನ್ನ ಸಖಿಯರೊಂದಿಗೆ ಸಹಕರಿಸಿದ್ದಳು. ಲಕ್ಷ್ಮಣನನ್ನು ಸ್ವಾಗತಿಸುವಾಗ, ಆರತಿಯ ಬೆಳಕನ್ನು ಹೀರುವಷ್ಟು ನಿಸ್ತೇಜ ಕಣ್ಣುಗಳಿಂದ ಆರತಿ ಬೆಳಗಿದ್ದಳು. ಇವರನ್ನು ಏಕಾಂತವಾಗಿ ಬಿಟ್ಟು ಸಖಿಯರೆಲ್ಲ ತೆರಳಿದ ಮೇಲೆ, ಲಕ್ಷ್ಮಣ ಅವಳ ಕೈಗಳನ್ನು ಮೃದುವಾಗಿ ಹಿಡಿದು, ಪ್ರೀತಿಯಿಂದ 'ಹೇಗಿದ್ದೀಯೆ ಊರ್ಮಿಳೆ?' ಎಂದು ಕೇಳಿದ್ದ. ಯುದ್ಧದ ಗಾಯಗಳಿಂದ ಇನ್ನೂ ಮೋಹಕವಾಗಿ ಕಾಣುತ್ತಿದ್ದ ಅವನ ದೇಹದ ಮೇಲೆ ನಿರ್ಭಾವುಕವಾಗಿ ಕಣ್ಣಾಡಿಸಿದ ಊರ್ಮಿಳೆ, ತನ್ನ ಕೈಯನ್ನು ಅವನ ಕೈಯಿಂದ ಬಿಡಿಸಿಕೊಳ್ಳದೆ, 'ಸಧ್ಯ. ನಿಮ್ಮಣ್ಣನಂತೆ ನೀವೂ ಸಹ ನಿಮ್ಮ ಹೆಂಡತಿಯನ್ನು ಅಗ್ನಿಪರೀಕ್ಷೆಗೆ ತಳ್ಳಲಿಲ್ಲವಲ್ಲ' ಎಂದಷ್ಟೇ ನುಡಿದಿದ್ದಳು. ಲಕ್ಷ್ಮಣನ ಕೋಪಕ್ಕೆ, ಬಿರುಸಿಗೆ, ಅಷ್ಟೇ ಏಕೆ, ಹೊಡೆತಕ್ಕೂ ಊರ್ಮಿಳೆ ತಯಾರಾಗಿದ್ದಳು. ಅವನು ಹೊಡೆದಿದ್ದರೆ ಪ್ರಾಯಶಃ ಒಳ್ಳೆಯದೇ ಆಗಿರುತ್ತಿತ್ತು. ಆಗಲಾದರೂ, ಅವಳಲ್ಲಿ ಹೆಪ್ಪುಗಟ್ಟಿದ್ದ ಭಾವನೆಗಳು ಕರಗಿ, ನೀರಾಗಿ ಹರಿದು ಮನಸ್ಸು ತಿಳಿಯಾಗುತ್ತಿತ್ತೇನೋ. ಆದರೆ ಲಕ್ಷ್ಮಣ ಹಾಗೆ ಮಾಡಲಿಲ್ಲ. ಎರಡು ಕ್ಷಣ ಹಾಗೆಯೇ ಅವಳನ್ನು ನೋಡಿ ಹೊರನಡೆದುಬಿಟ್ಟ. ಇವಳ ಮೌನ ಅವನನ್ನೂ ಆವರಿಸಿತ್ತು.

ಊರ್ಮಿಳೆಯ ದಾಂಪತ್ಯ ಅಲ್ಲಿಗೇ ಮುಗಿದಿತ್ತು. ಸೀತೆ ಗರ್ಭಿಣಿಯಾದ ನಂತರ ಅವಳ ಆರೈಕೆಗೆಂದು ಊರ್ಮಿಳೆ ಸೀತೆಯ ಅರಮನೆಯಲ್ಲೇ ವಾಸಿಸತೊಡಗಿದ್ದಳು. ಅವಳ ಸಖ್ಯದಲ್ಲಿ ಊರ್ಮಿಳೆಗೆ ನೆಮ್ಮದಿಯಿತ್ತು. ಸೀತೆಗೂ ಕೂಡ. ಆದರೆ, ಆ ನೆಮ್ಮದಿಯೂ ಹೆಚ್ಚು ಕಾಲ ಲಭ್ಯವಿರಲಿಲ್ಲ. ಯಾವನೋ ಅಗಸನ ಮಾತು ಕೇಳಿ ಭಾವ ರಾಮಚಂದ್ರ ಸೀತೆಯನ್ನು - ಅಂತಹ ಪರಿಸ್ಥಿತಿಯಲ್ಲೂ - ಕಾಡಿಗೆ ಅಟ್ಟಿದ್ದ. ಬಿಟ್ಟುಬಂದವನು ಲಕ್ಷ್ಮಣ. ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಊರ್ಮಿಳೆಗೆ ಅರಮನೆ ಅಸಹ್ಯವಾಯಿತು. ಸೀತೆಯಿಲ್ಲದ ಅರಮನೆ ಬಂಧನದಂತೆ ಕಾಣತೊಡಗಿತ್ತು. ತನ್ನ ಅತ್ತೆಯಂದಿರಿಗೆ, ಗಂಡನಿಗೆ, ಭಾವ - ಮೈದುನರಿಗೆ, ತಂಗಿಯರಿಗೆ ಹೇಳಿ, ಈಗ ವಾಸವಿರುವ ಪರ್ಣಕುಟಿಗೆ ಬಂದು ನೆಲೆನಿಂತಳು.

ಸುದ್ದಿ ತಿಳಿದ ವಸಿಷ್ಠ - ಅರುಂಧತಿಯರು ಹಳಿತಪ್ಪಿದ ಊರ್ಮಿಳೆಯ ಸಂಸಾರವನ್ನು ಸರಿಮಾಡಲು ಇನ್ನಿಲ್ಲದ ಪ್ರಯತ್ನಪಟ್ಟರು. ಅಲ್ಲದೆ, ವಸಿಷ್ಠರಿಗೆ ಇದು ತಮ್ಮ ಮಂತ್ರ - ಪ್ರವಚನಗಳಿಂದಲೇ ಆದ ಪರಿಣಾಮವೆಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಯಾವ ಸಂಧಾನಕ್ಕೂ ಊರ್ಮಿಳೆ ಒಪ್ಪಲಿಲ್ಲ. ಹಿರಿಯರೆಂದು ಅವರ ಮಾತುಗಳನ್ನು ಆಲಿಸಿದಳೇ ಹೊರತು, ಅದರಂತೆ ನಡೆಯುವ ಮನಸ್ಸು ಅವಳಲ್ಲಿರಲಿಲ್ಲ. ಒಂಟಿತನಕ್ಕೆ ಒಗ್ಗಿಹೋದ ಅವಳಿಗೆ ಈಗ ಯಾರ ಸಖ್ಯವೂ ಬೇಡವಾಗಿತ್ತು. ಭಾವನೆಗಳೆಲ್ಲ ಬತ್ತುಹೋಗಿ ಅಪ್ರಾಪ್ತ ವೈರಾಗ್ಯ ಪ್ರಾಪ್ತಿಯಾಗಿತ್ತು.

ಮೊದಮೊದಲು ಪರಿಚಾರಕಿಯರೊಡನೆ ಲಕ್ಷ್ಮಣನೂ ಬರುತ್ತಿದ್ದ. ಇವಳೇ ಭೇಟಿಯಾಗಲು ನಿರಾಕರಿಸಿದ್ದಳು. ಆದರೆ, ಅವನು ಬರುವುದು ನಿಂತಾಗ ಅವನ ದಾರಿ ಕಾದಳು. ಕೆಲವು ದಿನ ಅವನ ಆಗಮನದ ನಿರೀಕ್ಷೆಯೇ ಇವಳ ಸಂಗಾತಿಯಾಗಿತ್ತು. ನಂತರ ಅವನ ನೆನಪಿನ ಸಾಂಗತ್ಯವಿತ್ತು. ಈಗ ಆ ನೆನಪುಗಳೂ ಮಸುಕಾಗಲು ಆರಂಭಿಸಿದ್ದವು. ಈಗಷ್ಟೇ ಕೆಲವು ತಿಂಗಳುಗಳ ಮುಂಚೆ, ಅಕ್ಕ ಸೀತೆಯನ್ನು ಭೂದೇವಿ ತನ್ನಲ್ಲಿಗೆ ಕರೆಸಿಕೊಂಡ ವಿಷಯವನ್ನು ಹೂವು-ಹಣ್ಣುಗಳೊಂದಿಗೆ ಬಂದಿದ್ದ ಗೆಳತಿ ಉಸುರಿದ್ದಳು. 'ಅವಳೇ ಭಾಗ್ಯಶಾಲಿ' ಎಂದು ಊರ್ಮಿಳೆ ನಿಟ್ಟುಸಿರು ಬಿಟ್ಟಿದ್ದಳು.

ತನ್ನ ಜೀವನವನ್ನು ಒಮ್ಮೆ ತಿರುವಿನೋಡಿದಾಗ ಊರ್ಮಿಳೆಗೆ ಲಕ್ಷ್ಮಣನ ಬಗ್ಗೆ ಮರುಕವುಂಟಾಯಿತು. ತನ್ನ ಭಾವನೆಗಳಿಗೆ ಅವನು ಸ್ಪಂದಿಸಲಿಲ್ಲ ಎಂದು ಹೇಳುವುದಕ್ಕೆ ಇವಳು ಎಂದೂ ತನ್ನ ಭಾವನೆಗಳನ್ನು ಬಿಚ್ಚಿ ಹೇಳಿದವಳೇ ಅಲ್ಲ. ಭಾವನೆಗಳ ವಿಚಾರದಲ್ಲಿ ಲಕ್ಷ್ಮಣ ಸ್ವಲ್ಪ ಮಂದಮತಿಯೇ ಆದರೂ, ಅವ್ಯಕ್ತ ಭಾವನೆಗಳಿಗೆ ಯಾರೇ ಆದರೂ ಹೇಗೆ ತಾನೇ ಸ್ಪಂದಿಸಿಯಾರು? ಎಷ್ಟೋ ವರ್ಷಗಳ ಹಿಂದೆ ವಸಿಷ್ಠ - ಅರುಂಧತಿಯರು ತಿಳಿಹೇಳಿದ್ದ ಮಾತುಗಳು ಇಂದು ಊರ್ಮಿಳೆಗೆ ಪೂರ್ಣವಾಗಿ ಅರ್ಥವಾಗುತ್ತಿತ್ತು. 'ಇರಲಿ. ಇಂದು ಬರುವ ಸೇವಕರೊಡನೆ ಹೇಳಿಕಳುಹಿಸಿದರಾಯಿತು. ಲಕ್ಷ್ಮಣ ಇಲ್ಲಿಗೆ ಬಂದರೂ ಸರಿಯೇ. ಇಲ್ಲವಾದರೆ, ನಾನೇ ಅರಮನೆಗೆ ಮರಳುತ್ತೇನೆ. ಕಳೆದು ಹೋದ ವರುಷಗಳು ದೊರೆಯದಿದ್ದರೂ, ಇನ್ನುಳಿದ ಬದುಕನ್ನಾದರೂ ಜೊತೆಯಾಗಿಯೇ ಕಳೆಯೋಣ' ಎಂದು ಪರಿಚಾರಕಿಯ ಆಗಮನದ ನಿರೀಕ್ಷೆಯಲ್ಲಿ ಊರ್ಮಿಳೆ ಕಾದುಕುಳಿತಳು .

ಎಂದಿಗಿಂತ ತಡವಾಗಿ ಬಂದ ಗೆಳತಿಯ ಮುಖ ಮ್ಲಾನವಾಗಿತ್ತು. ಬೆಳಗ್ಗಿನ ಅಪಶಕುನಗಳಿಗೂ ಇವಳ ಚಹರೆಗೂ ಏನೋ ಸಂಬಂಧವಿರುವಂತೆ ಊರ್ಮಿಳೆಗೆ ಅನಿಸಿತು. ನಿಧಾನವಾಗಿ ಗೆಳತಿ ನುಡಿದಳು. ಹಿಂದಿನ ದಿನ ರಾಮಚಂದ್ರ ತನ್ನ ಮಕ್ಕಳಿಗೆ ಪಟ್ಟ ಕಟ್ಟಿ, ಸಂಜೆ ಸರಯೂ ನದಿಯಲ್ಲಿ ಮಿಂದು ಬರಲು ಹೋದವನು ಮರಳಲೇ ಇಲ್ಲವಂತೆ. ಸರಯುವಿನಲ್ಲೇ ಮುಳುಗಿದ ಎಂದು ಕೆಲವರು, ಹಿಮಾಲಯದ ಕಡೆ ನಡೆದು ಹೋದ ಎಂದು ಕೆಲವರು, ದಕ್ಷಿಣಾಭಿಮುಖವಾಗಿ ಹೋದ ಎಂದು ಇನ್ನು ಇತರರು ಏನೇನೋ ಚರ್ಚಿಸುತ್ತಿದ್ದರಂತೆ. ಇದನ್ನು ತಿಳಿದ ಲಕ್ಷ್ಮಣ, ತನ್ನ ಜವಾಬುದಾರಿಗಳನ್ನು ಭರತ - ಶತ್ರುಘ್ನರಿಗೆ ವಹಿಸಿ ಇಂದು ಬೆಳಗ್ಗೆ ತಪಸ್ಸಿಗೆ ಹೊರಟುಹೋದನಂತೆ.

ಊರ್ಮಿಳೆ ಶಿಲೆಯಂತೆ ಕೆಲಸಮಯ ಮಾತುಕತೆಯಿಲ್ಲದೆ, ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ ಕುಳಿತಳು. ನಂತರ ಇದ್ದಕ್ಕಿದ್ದಂತೆ ಎದ್ದು, ಉಟ್ಟ ಬಟ್ಟೆಯಲ್ಲಿಯೇ ತನ್ನ ಪರ್ಣಕುಟಿಯನ್ನು ತೊರೆದು ಅಯೋಧ್ಯೆಗೆ ವಿರುದ್ಧ ದಿಕ್ಕಿನಲ್ಲಿ ಸರಯೂ ನದಿಯ ದಂಡೆಯ ಮೇಲೆ ನಡೆಯುತ್ತಾ, ಒಮ್ಮೆಯೂ ಹಿಂದಿರುಗಿ ನೋಡದೆ, ಹೊರಟುಹೋದಳು. ಅವಳು ಮರಳುವಳೆಂದು ಸಂಜೆಯವರೆಗೂ ಕಾದ ಪರಿಚಾರಕಿಯರು ತಾವು ತಂದಿದ್ದ ಹೂವು ಹಣ್ಣುಗಳನ್ನು ತೆಗೆದುಕೊಂಡು ಮರಳಿ ಅಯೋಧ್ಯೆಗೆ ತೆರಳಿದರು.  

Friday, March 1, 2019

Yours Whimsically - Part 21: My ‘Notes on Nationalism’


It has been an eventful few days. The dastardly attack on a CRPF convoy in J&K, which shook the collective conscience of the nation, was followed by a precision strike by the Air Force, leading to an aerial engagement between India and Pakistan. The countries look poised on the precipice of escalation, even as the global community calls for peace.

Away from the border, other equally remarkable events unfolded. The opposition parties came together to issue a statement of solidarity with the forces and the government, stating this was not an event to be politicized. The government graciously held an all-party meeting to brief them. Today’s Indian political leaders had evolved into statesmen, or so it seemed. Elsewhere, citizens took out protest marches and candle light vigils as a mark of respect to the fallen soldiers. This was a ‘New India’ rising, as some commentators put it.

However, things unraveled quickly. The President of the ruling party tried scoring points at a rally by saying the martyrdom of soldiers would not go in vain as it was not the Opposition which was in power. The Opposition did not lag behind in making allegations either. However, when the Opposition parties tried to question the government, a senior minister was seen saying that the Opposition speaks the language of Pakistan. In an election year, in an emotionally-charged atmosphere, if this is not political opportunism, then what is? By equating the opposition to an ‘enemy’ state, the democratic dialogue in the country plumbed a new low. A recent article in the Indian Express had some sage advice: long years ago, L K Advani once told Rahul Gandhi that they were ‘political rivals’, not ‘enemies’. 

The governor of a state went to the extent of asking people to boycott everything Kashmiri! Television troopers, social media strategists and WhatsApp warriors swung into action, baying for blood, asking for war. Regional news channels and some national channels have since been engrossed in a race to the bottom, with disgraceful warmongering and shamelessly pandering to the gallery, without an iota of social responsibility. Social cohesion came apart as well, with attacks on students from Kashmir in different parts of the country, asking them to prove their ‘nationalism’. If the ‘New India’ consists of one group which claims ‘nationalism’ to be its patrimony at the cost of ‘othering’ some communities, we would only be playing into the hands of those looking to channel this sense of alienation into strife. 

*******************************************

There is a certain ease with which the word ‘anti-national’ is bandied about these days. The obvious challenge is how one conceptualizes and understands nationalism. Two sources greatly aided me in this process. One, George Orwell’s famous essay ‘Notes on Nationalism’; two, Foreign Affairs (by the Council on Foreign Relations) magazine’s latest edition, titled ‘The New Nationalism’. 

Nationalism is a relatively new concept, which was born out of intellectual churning during The Enlightenment. It is based on two fundamental principles – first, members of a nation, defined as an equal group of citizens with a shared history and a common political future, should rule the nation; second, they should do so in the interests of the nation. This led to the formation of nation-states, based on common laws which unite a people with supposed common ancestry. When states do not adhere to ‘national’ boundaries, it often results in civil strife as seen in West Asia today. 

For countries fighting imperial powers, nationalism, or the desire for a nation-state, involved invoking a glorious past – real or imagined. India was not an exception. However, there were mainly two schools of thought involved in this revival. One stream looked at the entire civilizational or cultural history of the land. Nehru famously called India a ‘palimpsest’, where each era/epoch left its imprint to form the composite idea of Indian-ness today.  The second stream was less generous. The glorious India they invoked was the one before the establishment of the Delhi Sultanate, except for a brief period, which saw the emergence of the Maratha Empire. These two ideas continue to contest each other even today. It remains a mystery, however, how one manages to wish away seven centuries or more of history (pretty much like wishing away nearly sixty years of governance!). 

The scope of ‘nationalism’ itself has undergone a transformation. One of the articles in the magazine argues that during the 1970s, scholars ignored the study of nationalism in favor of a ‘cosmopolitan globalism’. This was a grave error, for scholars were replaced by people who peddle  nationalism based on myths, prejudices and hatred, which has today led some people to criticize, if not demonize, nationalism as a whole. 

How does one define nationalism? In his essay, Orwell draws a distinction between patriotism and nationalism, two words often used interchangeably. A simple distinction between the two is ‘civic’ nationalism and ‘ethnic’, or as in the Indian case, ‘religious’ nationalism. Patriotism is about providing for our own people, without involving costs to the other. Nationalism, on the other hand, is a desire for power – not for himself, but for the ‘nation or the unit’ in which the person seeks to ‘sink his individuality’. This ‘nation’, Orwell says, need not be a physical entity like race or geographical area. It can even be an abstract idea or a concept, like the desire to establish an Islamic Caliphate. 

Narrow nationalism is on the rise globally. Be it Trump’s ‘Make America Great Again’, the anti-immigrant politics in Europe, an ill-judged Brexit or the contentious Citizenship (Amendment) Bill, 2016 in India, all these are different manifestations of conservative, ethnic or religious, nationalism. The invocation of xenophobia, loosely disguised as ‘national security’, is a common thread across these movements. This often has disastrous consequences on minorities - ethnic, religious and ideological - who are either violently suppressed or quietly degraded to second-class citizenry. 

[It must be noted here that the reasons stated for opposition to the Citizenship Bill at the central and regional levels are quite different. However, the rationale behind the bill strikes at the idea of India carefully cultivated through the freedom movement and seven decades of independence.] 

In the US, white working-class men moved towards Trump’s brand of nationalism because it promised to prioritize their interests over other colored groups and 'restore their central status' in the national discourse. A similar churning can be seen closer home. In 2014, the BJP had the luxury of being in the opposition and riding on a wave of popular sentiment built on one watchword: corruption. Today, in the absence of a ‘wave’, the contentious Ram Mandir issue has returned to the campaign. Reservation for the upper castes (and others in the general category), based on a false narrative of victimization, is an attempt to retain/regain the voter base of the Indian equivalent of the white working-class. Little do we realize that reservations to the general category will further balkanize the country. 

One reason for Modi’s – as well as Trump’s – success is that he cast himself as an outsider, opposed to the alleged ‘entitlement’ of those within the establishment – “Lutyens’ Delhi” – within and outside his own party, despite having been one of the longest serving chief ministers. As an emotional populace, we have always romanticized the under-dog. He churned a narrative of belonging to and speaking the voice of the ‘real people’. This was bought by the aam aadmi, who returned the BJP to power with a massive mandate. 

However, there is an inherent danger in this ‘nationalist populism’ – majoritarianism. Anybody opposed to their ideas is deemed inauthentic, illegitimate and cast as the ‘other’ to be reviled. Such attacks are not against the establishment or the elite alone. They strike at the very base of pluralist politics, with minorities as the first victims. Whoever disagrees with popular opinion is labelled ‘anti-people’; in the Indian case, ‘anti-national’. The biggest casualty in recent years is perhaps the fact that batting for minorities has become criminal in the majoritarian public narrative, so much so that ‘secular’ has become a cuss word. 

A nationalist, as the one described above, tends to stick to his ideas and beliefs, even in the face of hard facts. This is what Orwell calls ‘power hunger tempered with self-deception’. Orwell’s words seem prescient, prophetic even, if one observes the debate around statistics and data in the country today. Actions are judged and evaluated not based on the merit of the act, but on who the actor is. Welcome to the world of post-truth! 

Yet, nationalism is here to stay. A nation-state is, after all, the basis of democracy, public welfare and ‘binding people together with a sense of common purpose and mutual obligation’. Globalism is too abstract, too utopian a concept. What we need today, rather, is redefining and broadening the concept of nationalism. The challenge is to take back nationalism and mould it into an inclusive idea. Political leaders and the society – across the globe – have to cater to the needs of people as a whole and not any particular community. 

The modern idea of the Indian nation is based on the Constitution. That alone should be the guiding spirit. Emphasizing any other identity at the cost of ‘othering’ some communities is not the idea of India our founding fathers envisioned and struggled for.

Friday, February 8, 2019

Yours Whimsically - Part 20: A Sensitive Stomach & Other Imperfections

When was the last time I went out without having to visit the washroom - at least twice? I don't remember. Initially, it was a chance event. Today, it is the norm. I have adjusted my routine around this habit so that I am usually ready twenty minutes before the scheduled departure, utilizing rest of the time to address 'exigencies' - which I am so sure they will arise that they are no longer exigencies!

One of the first things I do upon entering a building - be it the lecture halls/research blocks back in college, my coaching centre now, Metro stations where I board and alight - is to carry out a thorough survey of the restrooms: location, hygiene, usability, so that I have data ready to be able to take decisions in dire situations after a thorough cost-benefit analysis. This has become second nature to me: whenever I go to any mall/restaurant, while others scan the shops/menu/people, I scan the layout for restrooms. And this alertness has served me well.

A few months ago, when I had to visit the doctor on some other grounds, my father courageously broached the topic of my 'motions' with the doctor. This was a great leap forward because for us Indians, specially the middle-class, motion and 'some other' issues are either embarrassing or taboo to be discussed in public! The doctor wished it away saying it is just a lifestyle disorder and came up with generic suggestions like exercise and proper dietary habits.

However, I have meditated upon this issue and have come up with my own half-baked diagnosis. This issue - despite there being tangible evidence - is more psychological than physical. I have observed that the exigency arises mostly when I have to meet someone, attend meetings or go out to eat - all social occasions, involving inter-personal contact with a wide range of people and opinions. Here, I propose a theory: this increased sensitivity is due to anxiety - of meeting actual people than conversations over social media/phone, of exposing ourselves to others' judgment. This anxiety itself is a result of us becoming more entangled in virtual spaces, more isolated in echo chambers of like-minded people and reinforced opinions. In me, this anxiety manifests through the stomach. In others, it may take different forms. (Such theorizing is also a great leap forward!)

You, Reader, might ask why I am writing about my tummy tantrums here and forcing you to read it. As the title reads, it is a 'whim'. You are free to close the tab anytime! Why am I writing about my imperfections anyway? Primarily because I am neither famous nor important enough for others to write about me. Besides, it would be too narcissistic if I went on writing about my talents, skills and everything else that is nice. I am modest! So all I am left to write about are my imperfections.

Among other things, I don't know how to ride a cycle and except for a few fleeting moments so long ago that it could have been in the previous life, I have not attempted to either. Neither do I know how to swim, despite having joined classes when I was in Class 3 or 4. My exit from those classes was so dramatic that it is part of family folklore even today! But then, that is a story for another day, another post. Today, let me tell you a story which will make you believe in God.

Dogs have a special affinity towards me. I have been chased multiple times, despite trying to maintain a respectable distance from them. People tell me that dogs sense fear and hence, attack. However, I find that to be victim blaming.

Everytime I go to my uncle's house, I make sure I call them to announce my arrival - so that they can shoo away the dog that usually sleeps inside their gate. That day, I stood waiting across the road for my aunt to clear the way for my passage. For whatever reason, the dog decided to chase me. I ran around screaming incomprehensibly before making my way inside. My uncle coolly remarked that I have a good voice!

The next time, I decided to up my game plan. I strategized that I would go further down the road before making the call. Usually, the dog went right, after exiting the gate. I would be waiting a few feet away - on the left. After it was a considerable distance away, I would run up to the gate and go in. The strategy was foolproof, I believed. However, I decided to add another layer of protection. While walking along the road to their house, I began praying to Gods that I don't usually believe in, (or so I profess). I took my position and called up. Lo! The dog was nowhere in the picture. It was only after I was comfortably inside the house that the dog entered the gate. The atheist in me wants to believe it was a mere coincidence. Perhaps. There is no way of verifying it, though. The next time, I might try the same strategy - to see if it works. But then, I would no longer be a believer, would I? How does one realize God without belief? Isn't God nothing but belief?

Again, you might ask why I am writing this while discussing about imperfections. What else is being a convenient atheist? Believing in the existence of God or rejecting it - both require tremendous courage, which I do not possess presently. Until I able to muster that conviction, I must accept this, just like my other quirks. After all, these are as much part of the self as every other positive attribute we take pride in. Our personality is a sum total of all these elements. We yearn for perfection. We must. However, perfection is not an event, is it? It is a process. And the most important part of this journey is appreciating and embracing our imperfections. 

Sunday, January 20, 2019

ದಿನಚರಿಯ ಹರಿದ ಪುಟ

'ಅದೇಕೋ ಬೆಳಗ್ಗೆ ಪೇಪರಿನಲ್ಲಿ ಓದಿದ ಆ ಸಾಲುಗಳು ತುಂಬ ಕಾಡುತ್ತಿವೆ. 'For all sad words of tongue and pen, the saddest are these: It might have been'. ಹೀಗೆ ಕಾಡೋದಿಕ್ಕೆ ಕಾರಣ ಏನಾದ್ರು ಇದೆಯ? ಗೊತ್ತಿಲ್ಲ. ಗೊತ್ತಿದ್ದಿದ್ರೆ, ಹೀಗೆ diary ಬರೆಯೋಕೆ ಯಾಕೆ ಕೂರುತ್ತಿದೆ? ಇಲ್ಲಿ ಬಂದಿರೋದೇ ಆ ಉದ್ದೇಶಕ್ಕೆ: ಕಾರಣ ಹುಡುಕೋಕ್ಕೆ. ಎಲ್ಲವನ್ನ ಯೋಚನೆ ಮಾಡಿ ಆಮೇಲೆ ಪೇಪರ್ ಮೇಲೆ ಬರೀತೀನಿ ಅನ್ನೋದು ಶುದ್ಧ ಸುಳ್ಳು. ಬರೀ ಒಂದು skeleton ತಯಾರು ಮಾಡ್ಕೊಬೋದೇ ಹೊರತು ಹೆಚ್ಚೇನೂ ಸಾಧ್ಯ ಇಲ್ಲ. At least, ನಂಗೆ ಹಾಗೆ. ಲಹರಿಯಲ್ಲಿ ಬರೆಯೋವಾಗ, ಸುಪ್ತಮನಸ್ಸಲ್ಲಿ ಇರೋದು ಕೂಡ ಹೊರಗೆ ಬರುತ್ತೆ ಅಂತ ಎಲ್ಲೋ ಓದಿದ್ದೆ. ಎಷ್ಟೇ ಆಗ್ಲಿ, ಇದು ನನ್ನ diary. ಇಲ್ಲಿ ಏನು ಮುಚ್ಚು ಮರೆ? 

ಈ ಕೆಲವು ದಿನಗಳ ಹಿಂದೆ ಒಂದು ಘಟನೆ ನಡೀತು. Facebookನಲ್ಲಿ scroll ಮಾಡ್ತಾಯಿದ್ದೆ - ಅದೊಂದು ಕೆಟ್ಟ ಅಭ್ಯಾಸ ನೋಡು. Time ಸಿಕ್ಕಾಗೆಲ್ಲ ಬರೀ ಇಷ್ಟೇ ಆಯಿತು. ಬೇರೆಯವರ ಜೀವನದ ಬಗ್ಗೆ ಇಲ್ಲದೆ ಇರೋ ಕುತೂಹಲ ಹುಟ್ಟಿಸೋ ಅಂತ ಕೆಲಸ ಮಾಡತ್ತೆ ಅದು. ಎಲ್ಲರು ಖುಷಿಯಾಗಿದ್ದಾರೆ, ಚೆನ್ನಾಗಿದ್ದರೆ ಅಂತಾನೆ ತೋರ್ಸೋದು. ಅಲ್ಲ. ಚೆನ್ನಾಗಿರ್ಲಿ. ಆದ್ರೆ, ಅದರ ಪ್ರದರ್ಶನ ಯಾಕೆ? ಅದನ್ನ ನೋಡಿ ಸಂಬಂಧ ಪಟ್ಟೋರು ಪಡದೆ ಇರೋರು likeಗಳ ಮಳೆ ಸುರಿಸೋದು. ಅಂದುಕೊಂಡಷ್ಟು likes ಬರದೇ ಇದ್ದಾಗ 'ಯಾಕೆ ಬರಲಿಲ್ಲ?' ಅಂತ ಯೋಚಿಸಿ ಕೂರೋದು, ಪದೇ ಪದೇ  check ಮಾಡೋದು. ಎಷ್ಟೋ ಬಾರಿ disable ಕೂಡ ಮಾಡಿದ್ದೀನಿ phoneನಲ್ಲಿ. ಆದರೆ, ನಂದೇ photo upload ಮಾಡಕ್ಕೆ ಮತ್ತೆ enable ಮಾಡ್ತೀನಿ. - ಇರ್ಲಿ. ಅವತ್ತು ಹಾಗೆ ನೋಡ್ತಾ ಇದ್ದಾಗ, ನನ್ನ school classmate ಒಬ್ಬಳ ಫೋಟೋ ಕಣ್ಣಿಗೆ ಬಿತ್ತು. 

ಈಗ ಏಳೆಂಟು ವರ್ಷದಿಂದ ನಾವುಗಳು ಯಾರು contactನಲ್ಲಿಲ್ಲ. Facebookನಲ್ಲೂ ಸಂಧಿಸೋದು ಕಡಿಮೆ. ಅವತ್ತು ಅದೇನು ಗ್ರಹಚಾರವೋ, ಕಂಡಿತು. ಆಗ ಒಂದು ಸತ್ಯದ ಅರಿವಾಯ್ತು. Schoolನಲ್ಲಿ ಇರುವ ರೂಪಕ್ಕೂ ಅನಂತರ ಆಗುವ ಬದಲಾವಣೆಗೂ ಅದೆಷ್ಟು ವ್ಯತ್ಯಾಸ?! Change ಅಲ್ಲ ಅದು. Transformation. ಅವಳು ಮತ್ತು ನಮ್ಮ ಇತರೆ classmates ಕೆಲವರು ಎಲ್ಲೋ ಊಟಕ್ಕೋ ತಿಂಡಿಗೋ ಹೋಗಿದ್ದಾಗ ತೆಗೆದ photo. Edit ಮಾಡಿದ್ದರು, ನಿಜ. Even accounting for that, ಅದೆಂಥ ಜಾದು ಅನ್ನಿಸ್ತು! ನಾನು ಕೂಡ like ಮಾಡಿದೆ. 

ಕೆಲವು ನಿಮಿಷಗಳ ನಂತರ, ಮತ್ತೆ phone vibrate ಆಯಿತು. Friend request ಬಂದಿತ್ತು. ಅದೇ ಫೋಟೋದಲ್ಲಿ ಇದ್ದ ನನ್ನ ಇನ್ನೊಬ್ಬಳು classmate ಇಂದ. Accept ಮಾಡಿದ ನಂತರ Messengerನಲ್ಲಿ ಮತ್ತೆ notification ಬಂತು. ಅದನ್ನ ನೋಡೋವಾಗ ಕೈತಪ್ಪಿ 'wave' ಆಗಿ ಹೋಯ್ತು. It was not anything close to a Freudian slip! 'ಕರ್ಮವೇ' ಅಂದುಕೊಂಡೆ. ಒಟ್ಟಿಗೆ ಓದುತ್ತಿದ್ದಾಗಲೇ ಹೆಚ್ಚಾಗಿ ಏನು ಮಾತಾಡದೆ ಇದ್ದ ನಾನು, ಈಗ ಇದ್ದಕ್ಕಿದ್ದ ಹಾಗೆ 'Hi'  ಅಂದರೆ - ಅದು ಈಗಿನ ಫೋಟೋ ನೋಡಿ - ಎಷ್ಟು cheap ಅಂತ ಭಾವಿಸಲ್ಲ ಅವಳು ನನ್ನ. ಯಾವ ಸಹವಾಸವೂ ಬೇಡ ಅಂತ wifi off ಮಾಡಿ, ನನ್ನ ಓದಿನ ಕಡೆಗೆ ಹೋದೆ. ಸಂಜೆ ನೋಡಿದಾಗಲೂ ಏನು ಬಂದಿರಲಿಲ್ಲ. 'ಸಧ್ಯ. ಅವಳು ignore ಮಾಡಿರಬೇಕು. ಮಾಡಿದ್ದೇ ಒಳ್ಳೆಯದಾಯ್ತು' ಅಂತ ನಿಟ್ಟುಸಿರು ಬಿಟ್ಟೆ. 

ಮಲಗುವ ಮುನ್ನ phone check ಮಾಡುವ ದುರಭ್ಯಾಸ ಇದೆ. (ಹೇಗಾದರೂ ಬಿಡಿಸಿಕೊಳ್ಳಬೇಕು!) ನೋಡುವಾಗ messengerನ notification ಬಂತು. 'ಹೇಗಿದ್ದೀಯ?' ಅಂತ ಕಳಿಸಿದ್ದಳು. ಗಲಿಬಿಲಿಗೊಂಡೆ. Seen ಮಾಡದೇ, off ಮಾಡಿ ಹೊದಿಗೆಯೊಳಗೆ ಸೇರಿಕೊಂಡೆ. 'ಏಳುವ ವೇಳೆಗೆ ಇದೆಲ್ಲ ಕನಸು ಅಂತ ಅರಿವಾಗತ್ತೆ' ಎಂದು ಯೋಚಿಸುತ್ತ ಮಲಗಿದೆ. ಕೆಟ್ಟ ಕನಸೋ ಒಳ್ಳೆಯ ಕನಸೋ ಗೊತ್ತಿಲ್ಲ. ಅದ್ಯಾಕೆ ಹಾಗೆ ಗಾಬರಿ ಆದ್ನೋ ಗೊತ್ತಿಲ್ಲ. ರಾತ್ರಿ ಎಲ್ಲ ಏನೇನೋ ಕನಸುಗಳು. ಹಲವು ಬಾರಿ ಎಚ್ಚರ ಆಯಿತು. ಎರಡು ಬಾರಿ ಉಚ್ಛೆ ಹುಯ್ದು, ನೀರು ಕುಡಿದು ಬಂದು ಮಲಗಿದೆ. ಬೆಳಗ್ಗೆ ಎದ್ದಾಗ ಅನ್ನಿಸಿತು: 'ಹೇಗೂ ಮಾತು ಆರಂಭ ಆಗಿದೆ. ಈಗ ಏನು reply ಕೊಡದೆ ಇದ್ದರೆ cheap ಅಂತ ಭಾವಿಸಬಹುದು. ಹೇಗಿದ್ದರೂ ನಾನು ಬೆಳಗ್ಗೆ message ಕಳಿಸಿದರೆ ಅವಳು ಸಂಜೆಗೋ ರಾತ್ರಿಗೋ reply ಮಾಡೋದು. 'ಎಲ್ಲಿದ್ಯಾ?' 'ಹೇಗಿದ್ಯ?' 'ಏನು ಮಾಡುತ್ತಿರುವೆ?'ಗಿಂತ ಮುಂದೆ ಈ chat ಕ್ರಮಿಸಲ್ಲ' ಅಂತ. ಅದೇ ಭರವಸೆಯ ಮೇಲೆ reply ಕಳಿಸಿ ನಿರಾತಂಕವಾಗಿ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ಎರಡು ದಿನ ಹೀಗೇ ಕಳೀತು. 

ಅವತ್ತು ಶನಿವಾರ. ಇದ್ದಕಿದ್ದ ಹಾಗೆ ಅವಳಿಂದ message ಬಂತು. ನಾನು ಔಪಚಾರಿಕವಾಗಿ ಏನೋ ಹೇಳುತ್ತಿದ್ದೆ. ನನಗೂ class ಇರಲಿಲ್ಲ. ಅವಳಿಗೂ ಏನು ಕೆಲಸ ಇರಲಿಲ್ಲ ಅಂತ ಕಾಣುತ್ತೆ. ನಮ್ಮ staggered conversation ಅವತ್ತು continuous ಆಯ್ತು. ಮಾತಿನ ಮಧ್ಯೆ ಅವಳು 'ನಿನ್ನನ್ನ ನೆನ್ನೆ ನೋಡಿದೆ' ಅಂದಳು. Metro stationನ ಬಳಿಯಲ್ಲೇ ಅವಳ ಮನೆಯಂತೆ. ನಾನು ಹೋಗಿ ಬರುವಾಗ ಯಾವಾಗಲೋ ಕಂಡಿದ್ದಳಂತೆ. ಆದರೆ, ನಾನೇ ಅನ್ನುವ ಖಾತರಿ ಇಲ್ಲದೆ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. 'ಮುಂದಿನ ಬಾರಿ ಖಂಡಿತ ಮಾತಾಡೋಣ' ಅಂದಳು. ಒಂದು ಕ್ಷಣಕ್ಕೆ ಹೊಟ್ಟೆಯಲ್ಲಿ ಏನೋ ಕಸಿವಿಸಿ ಆಯಿತು. ಇಲ್ಲ ಎನ್ನಲಾಗದೇ, ಹೌದು ಎನ್ನಲಾಗದೇ ಕೇವಲ ಒಂದು smiley ಕಳಿಸಿದೆ. 

ಕೆಲವು ಬಾರಿ ನನ್ನ ನಡತೆ, moves ನನಗೇ ಆಶ್ಚರ್ಯ ಉಂಟು ಮಾಡತ್ತೆ. ಮಾರನೇ ದಿನದಿಂದ ನಾನು ಆ ರಸ್ತೆಯಲ್ಲಿ ಸ್ವಲ್ಪ ವೇಗವಾಗೇ ನಡೆಯಲು ಶುರು ಮಾಡಿದೆ - ಬೇಗ ಆ ರಸ್ತೆ ಕ್ರಮಿಸಿ stationನ ಒಳಗೆ ಸೇರಿಬಿಡಬೇಕು ಅನ್ನುವ ತವಕ. ಎರಡು ಮೂರು ದಿನಗಳು ಆಗಿರಬಹುದು. Stationಗೆ ಹೋಗುವಾಗ ಅವಳು ಎದುರೇ ಪ್ರತ್ಯಕ್ಷವಾದಳು. (ಆಗ ಇನ್ನೊಂದು ಸತ್ಯದ ಅರಿವಾಯ್ತು: Facebook, instagramನ filterಗಳ ಬಗ್ಗೆ. ಅವುಗಳ ಸಹಾಯವಿಲ್ಲದೆಯೂ ಚೆನ್ನಾಗೇ ಇದ್ದಳು. ಆದರೆ ಅಲ್ಲಿ ಕಂಡಷ್ಟಲ್ಲ. ಇರಲಿ.) ಕೆಲವು ಮಾತು ಆಡುವಷ್ಟರಲ್ಲೇ, ಅದೇಕೋ ನನ್ನ ಕಿವಿ ಕೆಂಪಾಗುವ ಅನುಭವ ಆಯ್ತು. ಇಬ್ಬರಿಗೂ ಸಂಕೋಚ ಆಗಬಾರದು ಅಂತ ಯೋಚಿಸಿ 'Classಗೆ ಹೊತ್ತಾಯ್ತು' ಅಂತ ಹೇಳಿ ಹೊರಟೇಬಿಟ್ಟೆ. 

ಅದಾದ ನಂತರ almost ಪ್ರತಿದಿನ, ನಾನು ಹೋಗುವ, ಬರುವ ವೇಳೆಗೆ ಸಿಗೋಳು. ಏನಿಲ್ಲದಿದ್ದರು ಅವಳ ಮನೆಯ ಬಳಿ ನಿಂತು ಯಾರೊಂದಿಗಾದರೂ ಮಾತನಾಡುತ್ತಿರೋಳು. ನಾನು ಕೂಡ ಛಳಿ ಬಿಟ್ಟು ಮಾತಾಡಲು ಶುರು ಮಾಡಿದೆ. 'ಕಥೆಯೊಂದು ಶುರುವಾಗಿದೆ' ಅಂತ ಅನ್ನಿಸಲಿಕ್ಕೆ ಶುರುವಾಯ್ತು. 

ಇದೇ ಸಮಯಕ್ಕೆ, ಒಂದು ದಿನದ ಮಟ್ಟಿಗೆ ಅಪ್ಪ ಅಮ್ಮ ಯಾವುದೋ ಊರಿಗೆ ಹೋದರು. ಅವತ್ತು ಮನೆಗೆ ವಾಪಾಸಾಗುವಾಗ ಇದ್ದಕ್ಕಿದ್ದಂತೆ idea ಹೊಳೆಯಿತು: ಹೇಗಿದ್ದರೂ ಮನೆಗೆ ಹೋಗಿ ನಾನೇ coffee ಮಾಡಬೇಕು. ಅದರ ಬದಲು, ಅವಳು ಸಿಕ್ಕಾಗ, ಹತ್ತಿರದಲ್ಲೇ ಇದ್ದ collegeನ ಪಕ್ಕದ ಸಣ್ಣ coffee shopನಲ್ಲಿ coffeeಗೆ ಕರೆದರೆ?! A lot can happen over coffee ಅಂತ ಯಾರೋ ಪುಣ್ಯಾತ್ಮರು ಹೇಳಿದ್ದಾರೆ. ನನ್ನ ಯೋಚನೆಗೆ ನಾನೇ ಬೆನ್ನು ತಟ್ಟಿಕೊಂಡು ನಡೆದೆ. ನನ್ನ ಅದೃಷ್ಟವೋ ಏನೋ, ಅವತ್ತು ಅವಳು ಅಲ್ಲಿ ಕಾಯುತ್ತಿರಲಿಲ್ಲ. 'ಛೇ' ಎಂದು ಮನೆಗೆ ಬಂದು ಒಬ್ಬಂಟಿಯಾಗಿ coffee ಹೀರುತ್ತಾ ಕೂತೆ. (ಇದೆಲ್ಲ ಬರೆಯುತ್ತಾ ನನಗೇ ಗೊತ್ತಾಗದ ರೀತಿಯಲ್ಲಿ ಆ lineಗಳು ಏಕೆ ಕಾಡುತ್ತಿವೆ ಅಂತ ಸ್ಫಷ್ಟ ಆಗುತ್ತಿದೆ.) 

ಇದೆಲ್ಲ ನಡೆದದ್ದು ಮೂರ್ನಾಲ್ಕು ವಾರಗಳ ಹಿಂದೆ. ಈ ಮಧ್ಯೆ ಅವಳು ಒಂದು ದಿನವೂ ಕಾಣಲಿಲ್ಲ. Facebookನಲ್ಲಿ ಸಂಪರ್ಕಿಸೋಕೆ ನನಗೂ ಹಿಂಜರಿಕೆ. ಹೀಗಿರುವಾಗ, ನೆನ್ನೆ ನನ್ನ laptopನಲ್ಲಿ Facebook check ಮಾಡುತ್ತಿದ್ದೆ - phoneನಲ್ಲಿ ಸಧ್ಯಕ್ಕೆ disable ಮಾಡಿದ್ದೀನಿ. ಅವಳ ಮದುವೆಯ ಫೋಟೋ ಕಣ್ಣಿಗೆ ಬೀಳಬೇಕೇ?! ಒಂದು ವಾರದ ಹಿಂದೆ ಮದುವೆಯಾಗಿ ಹೋಗಿದೆ. 'Congratulations'ಗಳ, likeಗಳ ಸುರಿಮಳೆಯೇ ನಡೆಯುತ್ತಿದೆ ಆ photoಗಳ ಮೇಲೆ.  

ಕೆಲವು ಸಮಯ ಏನೂ ತಿಳಿಯದ numbness ಆವರಿಸಿತು. ಅಮ್ಮ ಬಂದು coffee ಇಟ್ಟು ಹೋದದ್ದೂ ಗೊತ್ತಾಗಲಿಲ್ಲ. ಎರಡು ಬಾರಿ phone ring ಆಗಿದ್ದೂ ಗೊತ್ತಾಗಲಿಲ್ಲ. ನಾನೂ like ಮಾಡಬೇಕಾ?  ಅಥವಾ unfriend ಮಾಡಬೇಕಾ? ಅನ್ನುವ ಹೊಯ್ದಾಟದಲ್ಲಿ laptop ಮುಚ್ಚಿ ಹೊರನಡೆದೆ. Messengerನಲ್ಲಿ ಶುಭಾಶಯ ತಿಳಿಸೋಣ ಅಂದುಕೊಂಡು phone ತೆಗೆದು ಕೆಲವು ದಿನಗಳ ಕಾಲ ನಮ್ಮ ನಡುವೆ ನಡೆದಿದ್ದ chat ಓದಕ್ಕೆ ಶುರು ಮಾಡಿದೆ. ನಾನು ಪೂರ್ತಿ 'Queen's English'ನಲ್ಲಿ ಮಾತಾಡಿದ್ದರೆ, ಅವಳು SMS ಭಾಷೆಯಲ್ಲಿ ಉತ್ತರಿಸಿದ್ದಳು. ಗಂಡನ ಜೊತೆಗಿನ photo ಒಂದನ್ನು profile picture ಮಾಡಿಕೊಂಡಿದ್ದಾಳೆ ಈಗ. ಯಾವ ಶುಭಾಶಯವೂ ಬೇಡ ಅನ್ನಿಸಿ phone ಒಳಗಿಟ್ಟೆ. 

ಅದೇಕೋ, ಎದುರಿಗೆ ಸ್ವಲ್ಪ ಕಾಣುತ್ತಿದ್ದ dark circles ಈ photoದಲ್ಲಿ ಹೆಚ್ಚಾಗೇ ಕಾಣುತ್ತಿದೆ, ಮದುವೆಯ make-up ಇದ್ದರೂ. ಹಾಗೆಂದೇ message ಕಳಿಸಲಾ ನಾಳೆ? ಬೇಡ. ನನ್ನನ್ನು cheap ಎಂದು ಭಾವಿಸಿದರೆ?! ಆ ಸಹವಾಸವೇ ಬೇಡ.'