Monday, March 25, 2019

ಊರ್ಮಿಳೆ

ಈಗ ಕೆಲವು ವರ್ಷಗಳಿಂದ ಸರಯೂ ನದಿಯ ತೀರದಲ್ಲೇ ಊರ್ಮಿಳೆ ಒಂದು ಸಣ್ಣ ಪರ್ಣಕುಟಿಯನ್ನು ನಿರ್ಮಿಸಿಕೊಂಡು, ಸನ್ಯಾಸಿನಿಯಂತೆ ವಾಸವಾಗಿದ್ದಳು. ರಾಮಚಂದ್ರನ ಆಜ್ಞೆ, ಲಕ್ಷ್ಮಣನ ಅಪೇಕ್ಷೆ: ದಿನವೂ ಅವಳಿಗೆ ಅರಮನೆಯಿಂದಲೇ ಊಟ ತರುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ, ಅವಳ ನಿತ್ಯ ಪೂಜೆಗೆ ಹೂಗಳನ್ನು, ನೈವೇದ್ಯಕ್ಕೆ ಹಣ್ಣುಗಳನ್ನು ಸಹ ಅರಮನೆಯ ಉದ್ಯಾನದಿಂದಲೇ ಕಳುಹಿಸಲಾಗುತ್ತಿತ್ತು. ಅವನ್ನು ತರುವ ಪರಿಚಾರಕಿಯರೊಡನೆ ಒಂದೆರಡು ಮಾತಾಡಿ ಊರ್ಮಿಳೆ ಅರಮನೆಯ ಸಮಾಚಾರವನ್ನು ತಿಳಿದುಕೊಳ್ಳುತ್ತಿದ್ದಳು. ಹಾಗೆ ಅಲ್ಲವೇ ಅವಳ ಅತ್ತೆ ಸುಮಿತ್ರೆ ತೀರಿಹೋದ ಸುದ್ದಿ ತಿಳಿದದ್ದು? ಅರಮನೆಗೆ ಹೋಗಿ ತಾಯಿಯಂಥ ಆ ಮಹಾತಾಯಿಯನ್ನು ನೋಡುವ ಮನಸ್ಸಾದರೂ, ಊರ್ಮಿಳೆ ತಡೆದಿದ್ದಳು. ಆದರೆ, ಅವರ ನೆನಪಿನಲ್ಲಿ, ಹದಿಮೂರು ದಿನಗಳ ಕಾಲ ಕೇವಲ ಒಂದು ಹೊತ್ತು ಊಟ ಮಾಡಿದ್ದಳು. ಊರ್ಮಿಳೆ ಅರಮನೆಯನ್ನು ತೊರೆದೂ ತೊರೆಯದವಳಾಗಿದ್ದಳು.

ಅಂದು ಬೆಳಗ್ಗೆ ಅದೇಕೋ ಊರ್ಮಿಳೆಗೆ ಹೇಳಲಾರದ ತಳಮಳ. ಏನೇನೋ ಅಪಶಕುನಗಳು. ಧ್ಯಾನಕ್ಕೆ ಕುಳಿತರೂ ಮನಸ್ಸು ಒಂದೆಡೆ ನಿಲ್ಲದು. ಅದೇ ಹಳೆಯ ನೆನಪುಗಳು. ಎಂದೂ ಇಲ್ಲದೆ, ಇಂದೇಕೆ ಒತ್ತರಿಸಿ ಬರುತ್ತಿದ್ದವೋ? ಧ್ಯಾನ, ಪೂಜೆಗಳನ್ನು ಬಿಟ್ಟು ಊರ್ಮಿಳೆ ತನ್ನ ಬದುಕನ್ನು ಅವಲೋಕಿಸುತ್ತಾ ಕುಳಿತಳು.

ಬಾಲ್ಯದ ನೆನಪುಗಳು ಮಸುಕಾಗುವಷ್ಟು ವಯಸ್ಸಾಗಿತ್ತು ಅವಳಿಗೆ. ಅದೂ ಅಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೇ, ಅಕ್ಕ ಸೀತೆಯೊಡನೆ ಅವಳಿಗೂ, ತನ್ನ ಚಿಕ್ಕಪ್ಪನ ಮಕ್ಕಳಿಗೂ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದರು. 'ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಇನ್ನು ನಿಮ್ಮ ಸುಖಕ್ಕೆ ಎಣೆಯುಂಟೆ?' ಎಂದು ಗೆಳತಿಯರು ಹೇಳುವಾಗ ಇವಳಿಗೂ ರೋಮಾಂಚನವಾಗಿತ್ತು. ಲಕ್ಷ್ಮಣನನ್ನು ಕಂಡ ಕೂಡಲೇ ಮನಸೋತಿದ್ದಳು. ಲಕ್ಷ್ಮಣನೇನೋ ಸ್ಫುರದ್ರೂಪಿಯೇ. ಆದರೆ, ಅವಳಾಗಿಯೇ ಮರುಳಾದಳೋ ಅಥವಾ ಅವಳ ಗೆಳತಿಯರ ಮಾತು ಕೇಳಿ ಹಾಗಾಯಿತೋ ಎಂದು ಊರ್ಮಿಳೆಗೆ ಅಂದಿಗೂ ತಿಳಿದಿರಲಿಲ್ಲ. ಇಂದಿಗೂ ತಿಳಿದಿಲ್ಲ. ಅದಕ್ಕೇ ಇರಬೇಕು, ಮನಸ್ಸು ಮರ್ಕಟ ಎಂದು ತಿಳಿದವರು ಹೇಳುವುದು.

ತವರಿಗೆ ವಿದಾಯ ಹೇಳಿದಾಗಲೂ ಅವಳಿಗೆ ಹೆಚ್ಚು ದುಃಖವಾಗಿರಲಿಲ್ಲ. ಏಕೆಂದರೆ, ಅವಳ ಅಕ್ಕ ಸೀತೆ, ಮಾಂಡವಿ, ಶ್ರುತಕೀರ್ತಿಯರೆಲ್ಲರೂ ಮೊದಲಿನಂತೆ ಈಗಲೂ ಜೊತೆಯಲ್ಲಿರುವರು. ಅಲ್ಲದೆ, ತಂದೆಯಂತೇ ಪ್ರೀತಿಯಿಂದ ಕಾಣುವ ಮಹಾರಾಜ ದಶರಥ; ಮೂರು ಜನ ಅತ್ತೆಯರೂ ಕೂಡ ಅಕ್ಕರೆಯಿಂದಲೇ ಕಾಣುವರು. ಹೊಸದಾಂಪತ್ಯ. ಲಕ್ಷ್ಮಣನೂ ಅವಳನ್ನು ಅತ್ಯಂತ ಪ್ರೀತಿ, ಪ್ರೇಮಗಳಿಂದ ಕಾಣುತ್ತಿದ್ದ. ಅವಳ ಗೆಳತಿಯರ ಮಾತಿನಲ್ಲಿ ನಿಜವಿತ್ತು. ಲಕ್ಷ್ಮಣನಿಗೆ ಮುಂಗೋಪ ಹೆಚ್ಚು ಎನ್ನುವುದೊಂದನ್ನು ಬಿಟ್ಟರೆ, ಅಯೋಧ್ಯೆಯಲ್ಲಿ ಅವಳಿಗೆ ಯಾವ ತೊಂದರೆಯೂ ಇದ್ದಂತಿರಲಿಲ್ಲ. ರಾಜ್ಯವನ್ನು ಭಾಗ ಮಾಡಿ ತಮ್ಮ ಪಾಡಿಗೆ ತಾವು ಹೋಗಬೇಕೆಂದು ಊರ್ಮಿಳೆಗೆ ಎಂದೂ ಅನಿಸಿರಲಿಲ್ಲ. ಅನಿಸಿದ್ದರೂ ಅದು ಸಾಧ್ಯವಿಲ್ಲ ಎಂಬುದನ್ನು ಲಕ್ಷ್ಮಣನಲ್ಲಿ ರಾಮನ ಬಗ್ಗೆ ಇದ್ದ ಭಕ್ತಿ ಗೌರವಗಳನ್ನು ಕಂಡು ಅರಿತಿದ್ದಳು.

ಆ ಸುಖ ಸಂತೋಷಗಳೆಲ್ಲ ಕೆಲವು ವರ್ಷಗಳು ಮಾತ್ರ. ವನವಾಸ ಒದಗಿದ್ದು ಭಾವ ರಾಮನಿಗೆ. ಮೂರಾಬಟ್ಟೆಯಾಗಿದ್ದು ಮಾತ್ರ ಊರ್ಮಿಳೆಯ ಬದುಕು. ರಾಮ ಕಾಡಿಗೆ ಹೊರಟು ನಿಂತಾಗ, ಅಕ್ಕ ಸೀತೆಯೂ ಹೊರಟಳು. ರಾಮನಿದ್ದೆಡೆ ಲಕ್ಷ್ಮಣ. ಅವನೊಂದಿಗೆ ತಾನು ಎಂದು ಊರ್ಮಿಳೆಯೂ ಸಿದ್ಧವಾದಳು. ಅಂದು ಅಂತಃಪುರದಲ್ಲೆಲ್ಲಾ ಬಿಗುವಿನ ವಾತಾವರಣ ಮೂಡಿದ್ದು ಊರ್ಮಿಳೆಗೆ ಇನ್ನೂ ನೆನಪಿದೆ. ಸಖಿಯರ ನಡುವೆ ಗುಸುಗುಸು ಮಾತು. ಇವಳು ಕರೆದು ಕೇಳಿದ್ದಳು. ರಾಮ ಕಾಡಿಗೆ ಹೊರಟಿರುವುದನ್ನು ಕೇಳಿ ಲಕ್ಷ್ಮಣ ಮಹಾರಾಜ ದಶರಥ, ಕೈಕೇಯಿಯರನ್ನು ತೀರಿಸಲು ಹೊರಟನಂತೆ! ರಾಮ ಅವನನ್ನು ತಡೆದು ತಿಳುವಳಿಕೆ ಹೇಳಿದನಂತೆ. ಬುದ್ಧಿ ಸ್ಥಿಮಿತಕ್ಕೆ ಬಂದ ಮೇಲೆ ತನ್ನ ನಿರ್ಧಾರಕ್ಕೆ ಹೇಸಿ, ಲಕ್ಷ್ಮಣ ತನ್ನ ತಲೆಯನ್ನೇ ಕಡಿದುಕೊಳ್ಳಲು ಮುಂದಾದನಂತೆ. ಆಗಲೂ ರಾಮ ತಡೆದು ಸಮಚಿತ್ತತೆಯನ್ನು ಬೋಧಿಸಿದನಂತೆ. ಈ ಅಂತೇ-ಕಂತೆಗಳ ನಡುವೆ ಊರ್ಮಿಳೆ ಬೆಚ್ಚಿ, ತನ್ನ ಇಷ್ಟದೇವರುಗಳನೆಲ್ಲಾ ಪ್ರಾರ್ಥಿಸಿದ್ದಳು.

ಬಿರುಸಿನಲ್ಲೇ ಅಂತಃಪುರಕ್ಕೆ ಬಂದ ಲಕ್ಷ್ಮಣನಿಗೆ ನಯವಾಗಿ, ಅವರೊಂದಿಗೆ ತಾನೂ ವನವಾಸಕ್ಕೆ ಬರುತ್ತೇನೆ ಎಂದು ಊರ್ಮಿಳೆ ಕೇಳಿಕೊಂಡಳು. ಆದರೆ ಲಕ್ಷ್ಮಣ ಒಪ್ಪದೇ, ಅತ್ತೆ-ಮಾವನನ್ನು ನೋಡಿಕೊಳ್ಳುವ ಜವಾಬುದಾರಿ ಅವಳದ್ದೆಂದು ಖಡಾಖಂಡಿತವಾಗಿ ನುಡಿದುಬಿಟ್ಟ. ಅವನ ಮುಂಗೋಪಕ್ಕೆ ಹೆದರಿ, ಊರ್ಮಿಳೆ ಮರುಮಾತಾಡುವ ಧೈರ್ಯ ಮಾಡದೆ, ಗಂಟಲಲ್ಲೇ ತನ್ನ ಮಾತುಗಳನ್ನು, ಹೃದಯದಲ್ಲಿ ತನ್ನ ಭಯ-ಪ್ರೀತಿಗಳನ್ನು ಅದುಮಿಟ್ಟುಕೊಂಡಳು. ಇವರ ಈ ನಿರ್ಧಾರವನ್ನು ತಿಳಿದ ಗುರು ವಸಿಷ್ಠರು ಲಕ್ಷ್ಮಣ ಕಾಡಿಗೆ ಹೊರಡುವ ಮೊದಲು ಇಬ್ಬರನ್ನೂ ತಮ್ಮ ಆಶ್ರಮಕ್ಕೆ ಕರೆದು,  ಗೌಪ್ಯವಾಗಿ ಮಂತ್ರವೊಂದನ್ನು ಬೋಧಿಸಿದ್ದರು. ಆ ಮಂತ್ರದ ಪ್ರಭಾವದಿಂದ ನಡುವೆ ಹದಿನಾಲ್ಕು ವರ್ಷಗಳೇ ಸಾಗಿದರೂ, ಇಬ್ಬರಿಗೂ ಒಂದಿನಿತೂ ವಯಸ್ಸಾಗುವುದಿಲ್ಲ ಎಂದು ವಸಿಷ್ಠರು ಆಶ್ವಾಸನೆ ನೀಡಿದ್ದರು. ಸಂಸಾರದ, ರಾಜ್ಯದ ಸುಖಭೋಗಗಳನ್ನು ಕೂಡಿ  ಅನುಭವಿಸಬೇಕಾದ ವಯಸ್ಸಿನಲ್ಲಿ ಈ ಅಗಲಿಕೆ ಒದಗಿತಲ್ಲಾ ಎಂದು ತಾಯಿ ಅರುಂಧತಿ ಇವಳಿಗೆ ಕುಂಕುಮಕೊಟ್ಟು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದರು.

ರಾಮ-ಸೀತೆಯರೊಂದಿಗೆ ಲಕ್ಷ್ಮಣ ಕಾಡಿಗೆ ಹೊರಟರೆ, ಇತ್ತ ಊರ್ಮಿಳೆಯ ವನವಾಸ ಆರಂಭವಾಯಿತು. ಕೆಲವೇ ದಿನಗಳಲ್ಲಿ ದಶರಥ ಮಹಾರಾಜ ತೀರಿಕೊಂಡ. ನಂತರದ ದಿನಗಳಲ್ಲಿ ಗುರು ವಸಿಷ್ಠರು ತಾಯಿ ಕೌಸಲ್ಯೆ-ಸುಮಿತ್ರೆಯರಿಗೆ ಪ್ರವಚನ ನೀಡಲು ಆಗಾಗ ಬರುತ್ತಿದ್ದರು. (ಕೈಕೇಯಿ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ, ರಾಮ ಬರುವವರೆಗೂ ಊರ ಹೊರಗಡೆ ವಾಸವಾಗಿರಲು ನಿರ್ಧರಿಸಿದ್ದಳು). ಊರ್ಮಿಳೆಯೂ ಸಹ ತನ್ನ ಅತ್ತೆಯೊಂದಿಗೆ ಆ ಪ್ರವಚನಗಳನ್ನು ಕೇಳುತ್ತಿದ್ದಳು. ಅದರ ಪ್ರಭಾವವೋ? ಅಥವಾ ಆ ಮಂತ್ರದ ಪರಿಣಾಮವೋ? ದೇಹಕ್ಕೆ ಮುಪ್ಪು ಬರದಿದ್ದರೂ ಊರ್ಮಿಳೆಯ ಆಸೆ, ಆಕಾಂಕ್ಷೆ, ಕನಸು, ಕಾಮನೆಗಳೆಲ್ಲಾ ಹಿಂಬದಿಗೆ ಸರಿದವು. ಅರಮನೆಯಲ್ಲೇ ಇದ್ದು ಎಲ್ಲವನ್ನು ತೊರೆದವಳಂತಾಗಿದ್ದಳು.

ಆ ಹದಿನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಅವಳಿಗೆ ಲಕ್ಷ್ಮಣನನ್ನು ಕಾಣಬೇಕೆಂದನಿಸಿರಲಿಲ್ಲ. ವನವಾಸ ಮುಗಿಸಿ ಅವರೆಲ್ಲ ಅಯೋಧ್ಯೆಗೆ ವಿಜಯಿಗಳಾಗಿ ಬರುತ್ತಿದ್ದಾರೆ ಎಂದು ನಗರಕ್ಕೆ ನಗರವೇ ಸಂಭ್ರಮಿಸುತ್ತಿರುವಾಗಲೂ ಊರ್ಮಿಳೆ ಉದ್ರೇಕಕ್ಕೆ ಒಳಗಾಗಲಿಲ್ಲ. ಲಕ್ಷ್ಮಣನ ಆಗಮನದ ನಿರೀಕ್ಷೆಯಲ್ಲಿ ಅಂತಃಪುರವನ್ನು ಸಖಿಯರು ಸಿಂಗರಿಸುವಾಗ ತನಗೆ ಸಂಬಂಧವಿಲ್ಲದವಳಂತೆ ಊರ್ಮಿಳೆ ಕಿಟಕಿಯಿಂದ ಹೊರನೋಡುತ್ತಿದ್ದಳು. ಅವಳಿಗೆ ಅಲಂಕಾರ ಮಾಡುವಾಗಲೂ ಕೂಡ, ಯಾಂತ್ರಿಕವಾಗಿ ತನ್ನ ಸಖಿಯರೊಂದಿಗೆ ಸಹಕರಿಸಿದ್ದಳು. ಲಕ್ಷ್ಮಣನನ್ನು ಸ್ವಾಗತಿಸುವಾಗ, ಆರತಿಯ ಬೆಳಕನ್ನು ಹೀರುವಷ್ಟು ನಿಸ್ತೇಜ ಕಣ್ಣುಗಳಿಂದ ಆರತಿ ಬೆಳಗಿದ್ದಳು. ಇವರನ್ನು ಏಕಾಂತವಾಗಿ ಬಿಟ್ಟು ಸಖಿಯರೆಲ್ಲ ತೆರಳಿದ ಮೇಲೆ, ಲಕ್ಷ್ಮಣ ಅವಳ ಕೈಗಳನ್ನು ಮೃದುವಾಗಿ ಹಿಡಿದು, ಪ್ರೀತಿಯಿಂದ 'ಹೇಗಿದ್ದೀಯೆ ಊರ್ಮಿಳೆ?' ಎಂದು ಕೇಳಿದ್ದ. ಯುದ್ಧದ ಗಾಯಗಳಿಂದ ಇನ್ನೂ ಮೋಹಕವಾಗಿ ಕಾಣುತ್ತಿದ್ದ ಅವನ ದೇಹದ ಮೇಲೆ ನಿರ್ಭಾವುಕವಾಗಿ ಕಣ್ಣಾಡಿಸಿದ ಊರ್ಮಿಳೆ, ತನ್ನ ಕೈಯನ್ನು ಅವನ ಕೈಯಿಂದ ಬಿಡಿಸಿಕೊಳ್ಳದೆ, 'ಸಧ್ಯ. ನಿಮ್ಮಣ್ಣನಂತೆ ನೀವೂ ಸಹ ನಿಮ್ಮ ಹೆಂಡತಿಯನ್ನು ಅಗ್ನಿಪರೀಕ್ಷೆಗೆ ತಳ್ಳಲಿಲ್ಲವಲ್ಲ' ಎಂದಷ್ಟೇ ನುಡಿದಿದ್ದಳು. ಲಕ್ಷ್ಮಣನ ಕೋಪಕ್ಕೆ, ಬಿರುಸಿಗೆ, ಅಷ್ಟೇ ಏಕೆ, ಹೊಡೆತಕ್ಕೂ ಊರ್ಮಿಳೆ ತಯಾರಾಗಿದ್ದಳು. ಅವನು ಹೊಡೆದಿದ್ದರೆ ಪ್ರಾಯಶಃ ಒಳ್ಳೆಯದೇ ಆಗಿರುತ್ತಿತ್ತು. ಆಗಲಾದರೂ, ಅವಳಲ್ಲಿ ಹೆಪ್ಪುಗಟ್ಟಿದ್ದ ಭಾವನೆಗಳು ಕರಗಿ, ನೀರಾಗಿ ಹರಿದು ಮನಸ್ಸು ತಿಳಿಯಾಗುತ್ತಿತ್ತೇನೋ. ಆದರೆ ಲಕ್ಷ್ಮಣ ಹಾಗೆ ಮಾಡಲಿಲ್ಲ. ಎರಡು ಕ್ಷಣ ಹಾಗೆಯೇ ಅವಳನ್ನು ನೋಡಿ ಹೊರನಡೆದುಬಿಟ್ಟ. ಇವಳ ಮೌನ ಅವನನ್ನೂ ಆವರಿಸಿತ್ತು.

ಊರ್ಮಿಳೆಯ ದಾಂಪತ್ಯ ಅಲ್ಲಿಗೇ ಮುಗಿದಿತ್ತು. ಸೀತೆ ಗರ್ಭಿಣಿಯಾದ ನಂತರ ಅವಳ ಆರೈಕೆಗೆಂದು ಊರ್ಮಿಳೆ ಸೀತೆಯ ಅರಮನೆಯಲ್ಲೇ ವಾಸಿಸತೊಡಗಿದ್ದಳು. ಅವಳ ಸಖ್ಯದಲ್ಲಿ ಊರ್ಮಿಳೆಗೆ ನೆಮ್ಮದಿಯಿತ್ತು. ಸೀತೆಗೂ ಕೂಡ. ಆದರೆ, ಆ ನೆಮ್ಮದಿಯೂ ಹೆಚ್ಚು ಕಾಲ ಲಭ್ಯವಿರಲಿಲ್ಲ. ಯಾವನೋ ಅಗಸನ ಮಾತು ಕೇಳಿ ಭಾವ ರಾಮಚಂದ್ರ ಸೀತೆಯನ್ನು - ಅಂತಹ ಪರಿಸ್ಥಿತಿಯಲ್ಲೂ - ಕಾಡಿಗೆ ಅಟ್ಟಿದ್ದ. ಬಿಟ್ಟುಬಂದವನು ಲಕ್ಷ್ಮಣ. ರಘುವಂಶವಂತೆ. ಚಕ್ರವರ್ತಿಗಳಂತೆ. ಸುಂದರರಂತೆ. ಶೂರರಂತೆ. ಊರ್ಮಿಳೆಗೆ ಅರಮನೆ ಅಸಹ್ಯವಾಯಿತು. ಸೀತೆಯಿಲ್ಲದ ಅರಮನೆ ಬಂಧನದಂತೆ ಕಾಣತೊಡಗಿತ್ತು. ತನ್ನ ಅತ್ತೆಯಂದಿರಿಗೆ, ಗಂಡನಿಗೆ, ಭಾವ - ಮೈದುನರಿಗೆ, ತಂಗಿಯರಿಗೆ ಹೇಳಿ, ಈಗ ವಾಸವಿರುವ ಪರ್ಣಕುಟಿಗೆ ಬಂದು ನೆಲೆನಿಂತಳು.

ಸುದ್ದಿ ತಿಳಿದ ವಸಿಷ್ಠ - ಅರುಂಧತಿಯರು ಹಳಿತಪ್ಪಿದ ಊರ್ಮಿಳೆಯ ಸಂಸಾರವನ್ನು ಸರಿಮಾಡಲು ಇನ್ನಿಲ್ಲದ ಪ್ರಯತ್ನಪಟ್ಟರು. ಅಲ್ಲದೆ, ವಸಿಷ್ಠರಿಗೆ ಇದು ತಮ್ಮ ಮಂತ್ರ - ಪ್ರವಚನಗಳಿಂದಲೇ ಆದ ಪರಿಣಾಮವೆಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಯಾವ ಸಂಧಾನಕ್ಕೂ ಊರ್ಮಿಳೆ ಒಪ್ಪಲಿಲ್ಲ. ಹಿರಿಯರೆಂದು ಅವರ ಮಾತುಗಳನ್ನು ಆಲಿಸಿದಳೇ ಹೊರತು, ಅದರಂತೆ ನಡೆಯುವ ಮನಸ್ಸು ಅವಳಲ್ಲಿರಲಿಲ್ಲ. ಒಂಟಿತನಕ್ಕೆ ಒಗ್ಗಿಹೋದ ಅವಳಿಗೆ ಈಗ ಯಾರ ಸಖ್ಯವೂ ಬೇಡವಾಗಿತ್ತು. ಭಾವನೆಗಳೆಲ್ಲ ಬತ್ತುಹೋಗಿ ಅಪ್ರಾಪ್ತ ವೈರಾಗ್ಯ ಪ್ರಾಪ್ತಿಯಾಗಿತ್ತು.

ಮೊದಮೊದಲು ಪರಿಚಾರಕಿಯರೊಡನೆ ಲಕ್ಷ್ಮಣನೂ ಬರುತ್ತಿದ್ದ. ಇವಳೇ ಭೇಟಿಯಾಗಲು ನಿರಾಕರಿಸಿದ್ದಳು. ಆದರೆ, ಅವನು ಬರುವುದು ನಿಂತಾಗ ಅವನ ದಾರಿ ಕಾದಳು. ಕೆಲವು ದಿನ ಅವನ ಆಗಮನದ ನಿರೀಕ್ಷೆಯೇ ಇವಳ ಸಂಗಾತಿಯಾಗಿತ್ತು. ನಂತರ ಅವನ ನೆನಪಿನ ಸಾಂಗತ್ಯವಿತ್ತು. ಈಗ ಆ ನೆನಪುಗಳೂ ಮಸುಕಾಗಲು ಆರಂಭಿಸಿದ್ದವು. ಈಗಷ್ಟೇ ಕೆಲವು ತಿಂಗಳುಗಳ ಮುಂಚೆ, ಅಕ್ಕ ಸೀತೆಯನ್ನು ಭೂದೇವಿ ತನ್ನಲ್ಲಿಗೆ ಕರೆಸಿಕೊಂಡ ವಿಷಯವನ್ನು ಹೂವು-ಹಣ್ಣುಗಳೊಂದಿಗೆ ಬಂದಿದ್ದ ಗೆಳತಿ ಉಸುರಿದ್ದಳು. 'ಅವಳೇ ಭಾಗ್ಯಶಾಲಿ' ಎಂದು ಊರ್ಮಿಳೆ ನಿಟ್ಟುಸಿರು ಬಿಟ್ಟಿದ್ದಳು.

ತನ್ನ ಜೀವನವನ್ನು ಒಮ್ಮೆ ತಿರುವಿನೋಡಿದಾಗ ಊರ್ಮಿಳೆಗೆ ಲಕ್ಷ್ಮಣನ ಬಗ್ಗೆ ಮರುಕವುಂಟಾಯಿತು. ತನ್ನ ಭಾವನೆಗಳಿಗೆ ಅವನು ಸ್ಪಂದಿಸಲಿಲ್ಲ ಎಂದು ಹೇಳುವುದಕ್ಕೆ ಇವಳು ಎಂದೂ ತನ್ನ ಭಾವನೆಗಳನ್ನು ಬಿಚ್ಚಿ ಹೇಳಿದವಳೇ ಅಲ್ಲ. ಭಾವನೆಗಳ ವಿಚಾರದಲ್ಲಿ ಲಕ್ಷ್ಮಣ ಸ್ವಲ್ಪ ಮಂದಮತಿಯೇ ಆದರೂ, ಅವ್ಯಕ್ತ ಭಾವನೆಗಳಿಗೆ ಯಾರೇ ಆದರೂ ಹೇಗೆ ತಾನೇ ಸ್ಪಂದಿಸಿಯಾರು? ಎಷ್ಟೋ ವರ್ಷಗಳ ಹಿಂದೆ ವಸಿಷ್ಠ - ಅರುಂಧತಿಯರು ತಿಳಿಹೇಳಿದ್ದ ಮಾತುಗಳು ಇಂದು ಊರ್ಮಿಳೆಗೆ ಪೂರ್ಣವಾಗಿ ಅರ್ಥವಾಗುತ್ತಿತ್ತು. 'ಇರಲಿ. ಇಂದು ಬರುವ ಸೇವಕರೊಡನೆ ಹೇಳಿಕಳುಹಿಸಿದರಾಯಿತು. ಲಕ್ಷ್ಮಣ ಇಲ್ಲಿಗೆ ಬಂದರೂ ಸರಿಯೇ. ಇಲ್ಲವಾದರೆ, ನಾನೇ ಅರಮನೆಗೆ ಮರಳುತ್ತೇನೆ. ಕಳೆದು ಹೋದ ವರುಷಗಳು ದೊರೆಯದಿದ್ದರೂ, ಇನ್ನುಳಿದ ಬದುಕನ್ನಾದರೂ ಜೊತೆಯಾಗಿಯೇ ಕಳೆಯೋಣ' ಎಂದು ಪರಿಚಾರಕಿಯ ಆಗಮನದ ನಿರೀಕ್ಷೆಯಲ್ಲಿ ಊರ್ಮಿಳೆ ಕಾದುಕುಳಿತಳು .

ಎಂದಿಗಿಂತ ತಡವಾಗಿ ಬಂದ ಗೆಳತಿಯ ಮುಖ ಮ್ಲಾನವಾಗಿತ್ತು. ಬೆಳಗ್ಗಿನ ಅಪಶಕುನಗಳಿಗೂ ಇವಳ ಚಹರೆಗೂ ಏನೋ ಸಂಬಂಧವಿರುವಂತೆ ಊರ್ಮಿಳೆಗೆ ಅನಿಸಿತು. ನಿಧಾನವಾಗಿ ಗೆಳತಿ ನುಡಿದಳು. ಹಿಂದಿನ ದಿನ ರಾಮಚಂದ್ರ ತನ್ನ ಮಕ್ಕಳಿಗೆ ಪಟ್ಟ ಕಟ್ಟಿ, ಸಂಜೆ ಸರಯೂ ನದಿಯಲ್ಲಿ ಮಿಂದು ಬರಲು ಹೋದವನು ಮರಳಲೇ ಇಲ್ಲವಂತೆ. ಸರಯುವಿನಲ್ಲೇ ಮುಳುಗಿದ ಎಂದು ಕೆಲವರು, ಹಿಮಾಲಯದ ಕಡೆ ನಡೆದು ಹೋದ ಎಂದು ಕೆಲವರು, ದಕ್ಷಿಣಾಭಿಮುಖವಾಗಿ ಹೋದ ಎಂದು ಇನ್ನು ಇತರರು ಏನೇನೋ ಚರ್ಚಿಸುತ್ತಿದ್ದರಂತೆ. ಇದನ್ನು ತಿಳಿದ ಲಕ್ಷ್ಮಣ, ತನ್ನ ಜವಾಬುದಾರಿಗಳನ್ನು ಭರತ - ಶತ್ರುಘ್ನರಿಗೆ ವಹಿಸಿ ಇಂದು ಬೆಳಗ್ಗೆ ತಪಸ್ಸಿಗೆ ಹೊರಟುಹೋದನಂತೆ.

ಊರ್ಮಿಳೆ ಶಿಲೆಯಂತೆ ಕೆಲಸಮಯ ಮಾತುಕತೆಯಿಲ್ಲದೆ, ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ ಕುಳಿತಳು. ನಂತರ ಇದ್ದಕ್ಕಿದ್ದಂತೆ ಎದ್ದು, ಉಟ್ಟ ಬಟ್ಟೆಯಲ್ಲಿಯೇ ತನ್ನ ಪರ್ಣಕುಟಿಯನ್ನು ತೊರೆದು ಅಯೋಧ್ಯೆಗೆ ವಿರುದ್ಧ ದಿಕ್ಕಿನಲ್ಲಿ ಸರಯೂ ನದಿಯ ದಂಡೆಯ ಮೇಲೆ ನಡೆಯುತ್ತಾ, ಒಮ್ಮೆಯೂ ಹಿಂದಿರುಗಿ ನೋಡದೆ, ಹೊರಟುಹೋದಳು. ಅವಳು ಮರಳುವಳೆಂದು ಸಂಜೆಯವರೆಗೂ ಕಾದ ಪರಿಚಾರಕಿಯರು ತಾವು ತಂದಿದ್ದ ಹೂವು ಹಣ್ಣುಗಳನ್ನು ತೆಗೆದುಕೊಂಡು ಮರಳಿ ಅಯೋಧ್ಯೆಗೆ ತೆರಳಿದರು.  

Friday, March 1, 2019

Yours Whimsically - Part 21: My ‘Notes on Nationalism’


It has been an eventful few days. The dastardly attack on a CRPF convoy in J&K, which shook the collective conscience of the nation, was followed by a precision strike by the Air Force, leading to an aerial engagement between India and Pakistan. The countries look poised on the precipice of escalation, even as the global community calls for peace.

Away from the border, other equally remarkable events unfolded. The opposition parties came together to issue a statement of solidarity with the forces and the government, stating this was not an event to be politicized. The government graciously held an all-party meeting to brief them. Today’s Indian political leaders had evolved into statesmen, or so it seemed. Elsewhere, citizens took out protest marches and candle light vigils as a mark of respect to the fallen soldiers. This was a ‘New India’ rising, as some commentators put it.

However, things unraveled quickly. The President of the ruling party tried scoring points at a rally by saying the martyrdom of soldiers would not go in vain as it was not the Opposition which was in power. The Opposition did not lag behind in making allegations either. However, when the Opposition parties tried to question the government, a senior minister was seen saying that the Opposition speaks the language of Pakistan. In an election year, in an emotionally-charged atmosphere, if this is not political opportunism, then what is? By equating the opposition to an ‘enemy’ state, the democratic dialogue in the country plumbed a new low. A recent article in the Indian Express had some sage advice: long years ago, L K Advani once told Rahul Gandhi that they were ‘political rivals’, not ‘enemies’. 

The governor of a state went to the extent of asking people to boycott everything Kashmiri! Television troopers, social media strategists and WhatsApp warriors swung into action, baying for blood, asking for war. Regional news channels and some national channels have since been engrossed in a race to the bottom, with disgraceful warmongering and shamelessly pandering to the gallery, without an iota of social responsibility. Social cohesion came apart as well, with attacks on students from Kashmir in different parts of the country, asking them to prove their ‘nationalism’. If the ‘New India’ consists of one group which claims ‘nationalism’ to be its patrimony at the cost of ‘othering’ some communities, we would only be playing into the hands of those looking to channel this sense of alienation into strife. 

*******************************************

There is a certain ease with which the word ‘anti-national’ is bandied about these days. The obvious challenge is how one conceptualizes and understands nationalism. Two sources greatly aided me in this process. One, George Orwell’s famous essay ‘Notes on Nationalism’; two, Foreign Affairs (by the Council on Foreign Relations) magazine’s latest edition, titled ‘The New Nationalism’. 

Nationalism is a relatively new concept, which was born out of intellectual churning during The Enlightenment. It is based on two fundamental principles – first, members of a nation, defined as an equal group of citizens with a shared history and a common political future, should rule the nation; second, they should do so in the interests of the nation. This led to the formation of nation-states, based on common laws which unite a people with supposed common ancestry. When states do not adhere to ‘national’ boundaries, it often results in civil strife as seen in West Asia today. 

For countries fighting imperial powers, nationalism, or the desire for a nation-state, involved invoking a glorious past – real or imagined. India was not an exception. However, there were mainly two schools of thought involved in this revival. One stream looked at the entire civilizational or cultural history of the land. Nehru famously called India a ‘palimpsest’, where each era/epoch left its imprint to form the composite idea of Indian-ness today.  The second stream was less generous. The glorious India they invoked was the one before the establishment of the Delhi Sultanate, except for a brief period, which saw the emergence of the Maratha Empire. These two ideas continue to contest each other even today. It remains a mystery, however, how one manages to wish away seven centuries or more of history (pretty much like wishing away nearly sixty years of governance!). 

The scope of ‘nationalism’ itself has undergone a transformation. One of the articles in the magazine argues that during the 1970s, scholars ignored the study of nationalism in favor of a ‘cosmopolitan globalism’. This was a grave error, for scholars were replaced by people who peddle  nationalism based on myths, prejudices and hatred, which has today led some people to criticize, if not demonize, nationalism as a whole. 

How does one define nationalism? In his essay, Orwell draws a distinction between patriotism and nationalism, two words often used interchangeably. A simple distinction between the two is ‘civic’ nationalism and ‘ethnic’, or as in the Indian case, ‘religious’ nationalism. Patriotism is about providing for our own people, without involving costs to the other. Nationalism, on the other hand, is a desire for power – not for himself, but for the ‘nation or the unit’ in which the person seeks to ‘sink his individuality’. This ‘nation’, Orwell says, need not be a physical entity like race or geographical area. It can even be an abstract idea or a concept, like the desire to establish an Islamic Caliphate. 

Narrow nationalism is on the rise globally. Be it Trump’s ‘Make America Great Again’, the anti-immigrant politics in Europe, an ill-judged Brexit or the contentious Citizenship (Amendment) Bill, 2016 in India, all these are different manifestations of conservative, ethnic or religious, nationalism. The invocation of xenophobia, loosely disguised as ‘national security’, is a common thread across these movements. This often has disastrous consequences on minorities - ethnic, religious and ideological - who are either violently suppressed or quietly degraded to second-class citizenry. 

[It must be noted here that the reasons stated for opposition to the Citizenship Bill at the central and regional levels are quite different. However, the rationale behind the bill strikes at the idea of India carefully cultivated through the freedom movement and seven decades of independence.] 

In the US, white working-class men moved towards Trump’s brand of nationalism because it promised to prioritize their interests over other colored groups and 'restore their central status' in the national discourse. A similar churning can be seen closer home. In 2014, the BJP had the luxury of being in the opposition and riding on a wave of popular sentiment built on one watchword: corruption. Today, in the absence of a ‘wave’, the contentious Ram Mandir issue has returned to the campaign. Reservation for the upper castes (and others in the general category), based on a false narrative of victimization, is an attempt to retain/regain the voter base of the Indian equivalent of the white working-class. Little do we realize that reservations to the general category will further balkanize the country. 

One reason for Modi’s – as well as Trump’s – success is that he cast himself as an outsider, opposed to the alleged ‘entitlement’ of those within the establishment – “Lutyens’ Delhi” – within and outside his own party, despite having been one of the longest serving chief ministers. As an emotional populace, we have always romanticized the under-dog. He churned a narrative of belonging to and speaking the voice of the ‘real people’. This was bought by the aam aadmi, who returned the BJP to power with a massive mandate. 

However, there is an inherent danger in this ‘nationalist populism’ – majoritarianism. Anybody opposed to their ideas is deemed inauthentic, illegitimate and cast as the ‘other’ to be reviled. Such attacks are not against the establishment or the elite alone. They strike at the very base of pluralist politics, with minorities as the first victims. Whoever disagrees with popular opinion is labelled ‘anti-people’; in the Indian case, ‘anti-national’. The biggest casualty in recent years is perhaps the fact that batting for minorities has become criminal in the majoritarian public narrative, so much so that ‘secular’ has become a cuss word. 

A nationalist, as the one described above, tends to stick to his ideas and beliefs, even in the face of hard facts. This is what Orwell calls ‘power hunger tempered with self-deception’. Orwell’s words seem prescient, prophetic even, if one observes the debate around statistics and data in the country today. Actions are judged and evaluated not based on the merit of the act, but on who the actor is. Welcome to the world of post-truth! 

Yet, nationalism is here to stay. A nation-state is, after all, the basis of democracy, public welfare and ‘binding people together with a sense of common purpose and mutual obligation’. Globalism is too abstract, too utopian a concept. What we need today, rather, is redefining and broadening the concept of nationalism. The challenge is to take back nationalism and mould it into an inclusive idea. Political leaders and the society – across the globe – have to cater to the needs of people as a whole and not any particular community. 

The modern idea of the Indian nation is based on the Constitution. That alone should be the guiding spirit. Emphasizing any other identity at the cost of ‘othering’ some communities is not the idea of India our founding fathers envisioned and struggled for.