ನನ್ನ ಐದು ವರ್ಷಗಳ ಹಾಸ್ಟೆಲ್ ಜೀವನ ಮುಗಿಸಿ ಈಗಷ್ಟೇ ಮನೆಗೆ ಬಂದಿದ್ದೇನೆ. ಈ ಐದು ವರ್ಷಗಳಲ್ಲಿ, ಪ್ರತೀ ಬಾರಿ ರಜೆಗೆ ಬಂದಾಗಲೂ, ಬಂದ ಎರಡು ದಿನಗಳ ಒಳಗಾಗಿ ತಪ್ಪದೇ ಗಾಂಧೀ ಬಜಾರಿಗೆ ಹೋಗಿ ಬರುತ್ತಿದ್ದೆ. ಕೊನೆಯ ವರ್ಷದ ವೇಳೆಗೆ ಅದು ಒಂದು ವೈಯಕ್ತಿಕ ritualನಂತೇ ಆಗಿ ಹೋಯಿತು. ನನ್ನ ಪ್ರಕಾರ ನಮ್ಮ ಗಾಂಧೀ ಬಜಾರ್ ಸಂಪ್ರದಾಯಸ್ಥರ, ಮಧ್ಯಮ ವರ್ಗದವರ MG Roadಏ ಸರಿ. ನ್ಯಾಷನಲ್ ಕಾಲೇಜಿನ ಬಳಿ flyover ಬದಲು circle ಇದ್ದ ಸಮಯದಿಂದಲೂ ನಾನು ಗಾಂಧೀ ಬಜಾರಿಗೆ ಹೋಗಿ ಬರುತ್ತಿದ್ದೇನೆ. It has an ever-changing sense of permanence to it.
ಗಾಂಧೀ ಬಜಾರಿನಲ್ಲಿ, ಡಿ.ವಿ.ಜಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ, ಹಳೆಯ ಅದೆಷ್ಟೋ ನೆನಪುಗಳು ತಾಜಾ ಆಗುತ್ತವೆ. ಈಗ ಸುಮಾರು ಹದಿನೈದು-ಇಪ್ಪತ್ತು ವರ್ಷಗಳ ಮೊದಲು, ಅಲ್ಲಿನ ಮುಖ್ಯರಸ್ತೆಯಲ್ಲಿ 'ಶಾನ್ ಭಾಗ್' ಎಂಬ ಹೋಟೆಲ್ ಇತ್ತು. ಪ್ರತೀ ಬಾರಿ ಗಾಂಧೀ ಬಜಾರಿಗೆ ಹೋದಾಗಲೂ ಅಲ್ಲಿಯೇ ತಿಂಡಿ ತಿನ್ನುತ್ತಿದ್ದೆವು. ಎಷ್ಟರ ಮಟ್ಟಿಗೆ ಅಂದರೆ ಒಂದು ಕಾಲದಲ್ಲಿ ನನಗೆ ಹೋಟೆಲ್ ಹಾಗು 'ಶಾನ್ ಭಾಗ್' synonyms ಆಗಿ ಹೋದವು! ಆ ಹೋಟೆಲ್ ಮುಚ್ಚಿದ ಬಳಿಕ ನಮ್ಮ loyalty 'ರೋಟಿ ಘರ್'ಗೆ shift ಆಯಿತು. ಈಗ zomato ಬಂದಿರುವರಿಂದ, ಪ್ರತಿ ಬಾರಿ ಬೇರೆ ಬೇರೆ ಕಡೆಗೆ ಹೋಗುವ ಪ್ರಯತ್ನವಂತೂ ಮಾಡುತ್ತೇವೆ. ಆದರೆ, ಮನೆಯ ಬಳಿಯೇ ಇನ್ನೊಂದು ಹೋಟೆಲ್ ತೆರೆದಿರಿವುದು ಆ 'adventurous spirit'ಗೆ ಕಡಿವಾಣ ಹಾಕಿ, ಸೋಮಾರಿತನದ ಕಡೆ ಹೆಚ್ಚು ವಾಲುವಂತೆ ಮಾಡಿದೆ.
ಆಗೆಲ್ಲ ಇಡೀ ಗಾಂಧೀ ಬಜಾರಿನಲ್ಲಿ ಪುಸ್ತಕಗಳಿಗೆ ಹೆಸರುವಾಸಿಯಾಗಿದ್ದ ಜಾಗವೆಂದರೆ 'ಅಂಕಿತ ಪುಸ್ತಕ'. ಈಗಲೂ ಅದಕ್ಕೆ ತನ್ನದೇ ಆದ ಹೆಸರು - ಗೌರವಗಳಿದೆ. ಬಾಲ್ಯದಲ್ಲಿ ಕೊಂಡು ಓದಿದ ಪುಸ್ತಕಗಳಲ್ಲಿ ಪ್ರಾಯಶಃ ಮುಕ್ಕಾಲು ಭಾಗ ಅಲ್ಲೇ ಕೊಂಡದ್ದಿರಬೇಕು. ದೊಡ್ಡವರಾದಂತೆ, ಇಂಗ್ಲಿಷ್ ಪುಸ್ತಕ ಓದುವುದು ಹೆಚ್ಚಾದಂತೆ, ಅಲ್ಲೇ ರಸ್ತೆಯ ಬದಿಯಲ್ಲಿ ಮಾರುವ second-hand ಪುಸ್ತಕಗಳನ್ನು ಕೊಳ್ಳಲು ಶುರು ಮಾಡಿದೆವು. ನಮ್ಮ ಮನೆಯಲ್ಲಿ ಹೇಳುವ ಪ್ರಕಾರ, ನಾನು ಗಾಂಧೀ ಬಜಾರಿಗೆ ಹೋದಾಗಿನಿಂದ ಬರುವವರೆಗೂ ಪ್ರತಿಯೊಂದು ಅಂಗಡಿಯಲ್ಲೂ ಕಾಣುತ್ತಿದ್ದ ಪ್ರತಿಯೊಂದು ಆಟಸಾಮಾನು ಕೊಂಡುಕೊಡುವಂತೆ ಪೀಡಿಸುತ್ತಿದ್ದನಂತೆ. ಅಷ್ಟು ದೊಡ್ಡ ಪಟ್ಟಿಯಲ್ಲಿ ಒಂದೋ ಎರಡೋ ದಕ್ಕಿದರೂ ಸಾಕು ಅನ್ನುವ ಲೆಕ್ಕಾಚಾರ ನನ್ನದು. ಯಾವಾಗ ಇದು ಅಪ್ಪ ಅಮ್ಮನಿಗೆ ತಿಳಿಯಿತೋ, ಅಂದಿನಿಂದ ನಾನು ಪೀಡಿಸುತ್ತಿದ್ದಕ್ಕೆ ಬೆಲೆಯೇ ಇಲ್ಲದಾಗಿ ಹೋಯಿತು! ಗಾಂಧೀ ಬಜಾರ್ circle ದಾಟಿ ಆ ಕಡೆಗೆ ಹೋದರೆ, ಅಲ್ಲಿ ಈಗಲೂ CD - cassetteಗಳನ್ನು ಮಾರುವ ಅಂಗಡಿಯೊಂದಿದೆ. ಮನೆಗೆ ಹೊಸದಾಗಿ VCD-cum-tape recorder ಬಂದಾಗ, ನಮ್ಮಮ್ಮನ ಜೊತೆ ಹೋಗಿ ಕೆಲವು CDಗಳನ್ನೂ ಕೆಲವು cassetteಗಳನ್ನೂ ಕೊಂಡುಬಂದದ್ದರ ನೆನಪಿದೆ. ಕೈಗೊಂದು mobile, ಮನೆಗೊಂದು wi-fi ಬಂದ ಮೇಲೆ, ಆ cassetteಗಳು, CDಗಳ ಜೊತೆ player ಕೂಡ showcaseನ ಒಳಗಡೆ ಧೂಳು ಹಿಡಿಯುತ್ತಾ ಕೂತಿದೆ. ವರ್ಷಕ್ಕೊಮ್ಮೆ ಗೌರಿಯೂ ಅವಳ ಮಗ ಗಣೇಶನೂ ಮನೆಗೆ ಬಂದಾಗ, ಆ player ಕೂಡ ಆಚೆ ಬರುತ್ತೆ. ಸಾಂಗವಾಗಿ ಮಂತ್ರಗಳನ್ನು ಉಚ್ಛರಿಸಿ, ಪೂಜೆ ಮಾಡಿಸಿ, ಮತ್ತೆ ಇನ್ನೊಂದು ವರ್ಷದ ತನಕ ವಾಪಾಸಾಗಿ ಕೂರುತ್ತದೆ.
ಡಿ.ವಿ.ಜಿ ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ ಒಮ್ಮೆ ನಡೆದರೆ, ವಿಧವಿಧವಾದ ದೃಶ್ಯಗಳು, ಥರಥರವಾದ ವಾಸನೆ ಸುವಾಸನೆಗಳ ಅನುಭವ ಸಿಗುತ್ತದೆ. ಮೊದಲಿಗೆ ಜ್ಯೋತಿಪ್ರಕಾಶ್ ಅಂಗಡಿಯ ಪಾನಿಪುರಿ, ಭೇಲ್ ಪುರಿಗಳು. (ಸ್ವಲ್ಪ ಮುಂದೆಯೇ ಒಂದು ಮದ್ಯದಂಗಡಿಯೂ ಇದೆ. ಆದರೆ ಸಧ್ಯಕ್ಕೆ ಅದರ ಚರ್ಚೆ ಬೇಡ). ಮುಂದೆ ಹೋದರೆ, ಈಶ್ವರನ ದೇವಾಲಯದ ತುಳಸಿ ತೀರ್ಥದ ವಾಸನೆಯ ಜೊತೆ ಪಕ್ಕದ ಶ್ರೀನಿವಾಸ ಕಾಫಿ ಡಿಪೊದ ವಾಸನೆಯು ಬೆರೆತು ಹಿತವಾದ ಅನುಭವ ನೀಡುತ್ತದೆ. ಅದರ ಎದುರಿಗೇ ಸದಾ ಕಾಲ ಜನರಿಂದ ತುಂಬಿರುವಂಥ ಸುಬ್ಬಮ್ಮನ ಅಂಗಡಿ. ಈಚೆಗೆ ಅಮೆರಿಕಕ್ಕೆ ಹೋದ ನಮ್ಮ ಅತ್ತೆ-ಮಾವನಿಗೆ ಅಲ್ಲಿಂದ ಅಕ್ಕಿ ಹಪ್ಪಳ - ಈರುಳ್ಳಿ ಸಂಡಿಗೆಗಳನ್ನು ನಾನೇ ತಂದಿದ್ದೆ.
ಗಾಂಧೀ ಬಜಾರಿನ ಮುಖ್ಯರಸ್ತೆಯಲ್ಲಂತೂ ಎರಡು ಬದಿಗಳಲ್ಲಿ ಮಾರುವ ಹೂವು, ಹಣ್ಣು, ತರಕಾರಿ, ವೀಳ್ಯ - ಬಾಳೆಯೆಲೆಗಳು: ಕೊಳ್ಳದಿದ್ದರೂ, ಅದನ್ನು ಜೋಡಿಸಿಟ್ಟಿರುವ ರೀತಿಗೆ, ಅವುಗಳಿಂದ ಹೊಮ್ಮುವ ವಾಸನೆಗೆ ಅಲ್ಲಿಗೆ ಹೋಗಿಬರಬೇಕು. ಹಬ್ಬದ ಸಮಯಗಳಲ್ಲಂತೂ ಇಡೀ ರಸ್ತೆಯೇ ಜನರಿಂದ ಗಿಜಿಗುಡುತ್ತದೆ. ರಸ್ತೆ ದಾಟಿದ ಮೇಲೆ ಮೂಲೆಯಲ್ಲೇ ಸಿಗುವ ಗ್ರಂಧಿಗೆ ಅಂಗಡಿಗಳು. ರಾಶಿ ರಾಶಿಯಾಗಿ ಕೋನಿನಂತೆ ಪೇರಿಸಿಟ್ಟಿರುವ ಅರಿಶಿಣ - ಕುಂಕುಮದ ಜೊತೆ ಕರ್ಪೂರದ ಗಂಧವೂ ಬೆರೆತಾಗ ಆನಂದವಾಗುತ್ತೆ. ಅಲ್ಲಿಂದ ಮುಂದಕ್ಕೆ ಬಣ್ಣ ಬಣ್ಣದ ಬಟ್ಟೆಯ ಅಂಗಡಿಗಳು, ಶಾಲಾಮಕ್ಕಳಿಗೆ bag, bottleಗಳನ್ನು ಮಾರುವ ಅಂಗಡಿಗಳು, ಖಾದಿ ಭಂಡಾರ.
ಅಲ್ಲಿಂದ ಒಂದು ಹತ್ತಿಪ್ಪತ್ತು ಹೆಜ್ಜೆ ನಡೆದರೆ, ಒಂದು 4x4 ಅಥವಾ 5x5ಯಷ್ಟರ ಸಣ್ಣ ಅಂಗಡಿಯಲ್ಲಿ ಹೆಸರು ಬೇಳೆ - ಬೆಣ್ಣೆ ಗುಲ್ಕನ್ನುಗಳು ದೊರೆಯುತ್ತವೆ. ಖಾರ ಹೆಚ್ಚಾದರೆ, ಅದನ್ನು ನಿವಾರಿಸಲೆಂದೇ ನಿಂಬೂ ಸೋಡಾ ಕೂಡ ಮಾರುತ್ತಾನೆ. ನನಗೆ ನೆನಪಿರುವ ಕಾಲದಿಂದಲೂ ಆ ಅಂಗಡಿ ನಡೆಸುತ್ತಿರುವ ಇಬ್ಬರೂ ಹಾಗೆಯೇ ಇದ್ದಾರೆ. ಅಂಗಡಿಯೂ ಸಹ. ರಸ್ತೆ ದಾಟುವ ಮೊದಲೇ ಶ್ರೀನಿವಾಸ ಬ್ರಾಹ್ಮಣರ ಬೇಕರಿಯ ಖಾರ bun, bread toastಗಳ ವಾಸನೆ ಕೈಬೀಸಿ ಕರೆಯುತ್ತೆ. ಕಳೆದ ಐದು ವರ್ಷಗಳಲ್ಲಿ ನಾನು ಮನೆಯಿಂದ ಹಾಸ್ಟೆಲ್ಲಿಗೆ ಹೋಗುವಾಗ ಏನೇ ಮರೆತರೂ ಇಲ್ಲಿಯ ಚೂಡಾ, ಅವಲಕ್ಕಿ ಪುರಿ, ಹುರಿಗಾಳನ್ನು ಮರೆಯುತ್ತಿರಲಿಲ್ಲ. ಅಲ್ಲಿಂದ ಸ್ವಲ್ಪ ದೂರ ನಡೆದರೆ, ರಸ್ತೆಯ ಬಲಕ್ಕೆ ಕೃಷ್ಣ ಸ್ವೀಟ್ಸ್ ಇದೆ. ಅದಕ್ಕೂ ಮುಖ್ಯವಾಗಿ, ಕೃಷ್ಣ ಸ್ವೀಟ್ಸ್ ಎದುರಿಗೆ, ರಸ್ತೆಯ ಇನ್ನೊಂದು ಬದಿಯಲ್ಲಿ ಬಿಸಿ ಬಿಸಿ ಬಜ್ಜಿಗಳು ಸಿಗುತ್ತವೆ. ಸಂಗೀತದ ಕ್ಲಾಸಿಗೆ ಬರುತ್ತಿದ್ದ ಕಾಲದಲ್ಲಿ ಕ್ಲಾಸು ತಪ್ಪಿದರೂ ಬಜ್ಜಿ ತಪ್ಪಿಸುತ್ತಿರಲಿಲ್ಲ! ಅದೇಕೋ, ಮೊದಲಿನಿಂದಲೂ ಡಿ.ವಿ.ಜಿ ರಸ್ತೆಯಲ್ಲಿ ಇಲ್ಲಿಗಿಂತ ಮುಂದಕ್ಕೆ ಹೋದದ್ದೇ ಕಡಿಮೆ, ಹೋಳಿಗೆ ಮನೆ ಮೊದಲಾದ ಜಾಗಗಳಿದ್ದರೂ ಸಹ.
ಇಷ್ಟೆಲ್ಲಾ ಜೀವಂತಿಕೆಯ ನಡುವೆ, ಜೀವನವನ್ನು ಸಂಭ್ರಮಿಸುವ ವಿವಿಧ ಚಟುವಟಿಕೆಗಳ ನಡುವೆ, ಒಂದು ಅಬಲಾಶ್ರಮವಿದೆ. ಹಳೆಯ ಕಟ್ಟಡಗಳನ್ನು ಕೆಡವಿ ಹೊಸ complexಗಳು, ಅಂಗಡಿಗಳು ಬಂದಂತೆ, ಅಬಲಾಶ್ರಮವೂ ಕೂಡ renovate ಆಗಿ, ಇನ್ನಷ್ಟು ದೊಡ್ಡದಾಗಿ ಅದೇ ಸ್ಥಳದಲ್ಲಿ ನಿಂತಿದೆ. ಇದನ್ನು ಸಂಭ್ರಮಿಸಬೇಕೋ ಅಥವಾ ವ್ಯಥೆಪಡಬೇಕೋ ಎಂದು ಅದರ ಮುಂದೆ ನಡೆಯುವಾಗ ಪ್ರತೀ ಬಾರಿಯೂ ಯೋಚಿಸುತ್ತೇನೆ.
ಹಾಗಾದರೇ, ಪ್ರತಿ ರಜೆಯಲ್ಲಿ ನಾನು ಗಾಂಧೀ ಬಜಾರಿಗೆ ಹೋಗುತ್ತಿದ್ದದ್ದು ಈ ಕಾರಣಗಳಿಗೋ? ಇರಬಹುದು. ಇದಕ್ಕೂ ಮೀರಿ, ನನಗೆ ಅಗತ್ಯವಿದ್ದದ್ದು ಆ ಜನಸಂದಣಿಯ ನಡುವೆ ಓಡಾಡುವ ಅನುಭವ. ಎಲ್ಲ ಕಡೆಯಿಂದಲೂ ಕಿವಿಗೆ ಬೀಳುವ ಕನ್ನಡದ ಶಬ್ದಗಳು - ಬೈಗುಳಗಳಾದರೂ ಸರಿಯೇ - ಹಾಗು ಅವರಿವರು ಹೇಳುತ್ತಿದ್ದ ದಿನನಿತ್ಯದ ಜೀವನದ ಕಥೆಗಳು. ಅಲ್ಲದೆ, ಹತ್ತರಲ್ಲಿ ಎಂಟು ಬಾರಿ, ಯಾರಾದರೂ ಸಂಬಂಧಿಕರು, ಪರಿಚಯಸ್ಥರು, ಅಧ್ಯಾಪಕರು ಗಾಂಧಿ ಬಜಾರಿನಲ್ಲಿ ಕಾಣುತ್ತಾರೆ, ಸಿಗುತ್ತಾರೆ. ಕೆಲವೊಮ್ಮೆ, ಎಷ್ಟೋ ತಿಂಗಳುಗಳಲ್ಲಿ ಸಿಗದೇ ಇರುವವರು ಕೂಡ (ಬೇಡ ಎಂದರೂ) ಅಲ್ಲಿ ಭೇಟಿಯಾಗುತ್ತಾರೆ. ಇವರುಗಳಲ್ಲಿ ಶಾಲೆಯ, ಪಿ.ಯು ಕಾಲೇಜಿನ crushಗಳು ಕೂಡ ಕಂಡು, ಮಾತಿಗೆ ಸಿಗಬಹುದೇನೋ, number ದೊರೆಯಬಹುದೇನೋ ಎಂಬ ಆಸೆಯಿಂದ ನಾನು ಮನೆಯಿಂದ ಹೊರಡುತ್ತಿದ್ದೆ. ಈಗಲೂ ಆಗಾಗ ಹೊರಡುತ್ತೇನೆ...